ಮದ್ರಾಸ್‌ ಕಣ್ಣಿನ ಸೋಂಕಿಗೆ ಹೆದರಬೇಡಿ, ಇಲ್ಲಿದೆ ಮನೆ ಮದ್ದು

ಮದ್ರಾಸ್‌ ಕಣ್ಣಿನ ಸೋಂಕಿಗೆ ಹೆದರಬೇಡಿ, ಇಲ್ಲಿದೆ ಮನೆ ಮದ್ದು

ಇತ್ತೀಚಿನ ದಿನಗಳಲ್ಲಿ ದೇಶಾದ್ಯಾಂತ ಪಿಂಕ್ ಐ ಅಥವಾ ಕಣ್ಣಿನ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತದೆ. ಅದರಿಂದ ರಕ್ಷಿಸಿಕೊಳ್ಳಲು ಕಣ್ಣುಗಳಿಗೆ ರಾತ್ರಿ ಮಲಗುವ ಸಮಯದಲ್ಲಿ ಒಳ್ಳೆಯ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಸೋಂಕನ್ನು ಕಡಿಮೆ ಮಾಡಲೂ ಸಹ ಮನೆಯಲ್ಲೇ ಹಲವು ವಿಧಾನ ಅನುಸರಿಸಬಹುದು.

ಎಲ್ಲರಿಗೂ ಗೊತ್ತಿರುವಂತೆ ಜೇನುತುಪ್ಪ ಬ್ಯಾಕ್ಟೀರಿಯಾ ನಿರೋಧಕ ಅಂಶವನ್ನು ಒಳಗೊಂಡಿದೆ. ಜೇನುತುಪ್ಪ ಗುಲಾಬಿ ಕಣ್ಣು ಸೋಂಕಿನ ನಿವಾರಣೆಗೆ ಸಹಕಾರಿಯಾಗಿದೆ. ಒಂದು ಗ್ಲಾಸ್ ಶುದ್ಧ ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ. ಬಳಿಕ ಈ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು. ಜೇನುತುಪ್ಪದಿಂದ ಕೂಡಿರುವ ನೀರಿನಿಂದ ಕಣ್ಣುಗಳಲ್ಲಿ ಉಂಟಾಗುವ ಉರಿ ಹಾಗೂ ನೋವು ಕೂಡಲೇ ಆದಷ್ಟು ಕಡಿಮೆಯಾಗುತ್ತದೆ. ಹಾಗೂ ಸೋಂಕು ಬೇಗ ಕಡಿಮೆಯಾಗುತ್ತದೆ.

ಕಣ್ಣು ಬೇನೆಯ ಕಿರಿಕಿರಿಯನ್ನು ಆಲೂಗಡ್ಡೆಯಿಂದಲೂ ಕಡಿಮೆ ಮಾಡಿಕೊಳ್ಳಬಹುದು. ಆಲೂಗಡ್ಡೆಯ ಹೋಳುಗಳನ್ನು ಕಣ್ಣುಗಳ ಮೇಲೆ ಇರಿಸಿಕೊಳ್ಳಬೇಕು. ಆಲೂಗಡ್ಡೆಯ ಹೋಳುಗಳು ತಣ್ಣಗಿರುತ್ತವೆ. ಇದರಿಂದ ಕಣ್ಣುಗಳಿಗೆ ಸಹಾಯವಾಗುತ್ತದೆ. 10-15 ನಿಮಿಷಗಳ ಕಾಲ ಆಲೂ ಹೋಳುಗಳನ್ನು ಇಟ್ಟುಕೊಳ್ಳಬಹುದು.

ಕಣ್ಣುಗಳಿಗೆ ಹುಳಿಯಾದ ಲಿಂಬೆರಸ ಬಿಡುವುದಕ್ಕೆ ಬಹುತೇಕ ಜನ ಹೆದರುತ್ತಾರೆ. ಆದರೆ, ಕಣ್ಣಿನ ಸೋಂಕಿಗೆ ಇದು ರಾಮಬಾಣ. ಸೋಂಕು ಉಂಟಾದಾಗ ಒಂದು ಹನಿ ಲಿಂಬೆರಸವನ್ನು ಕಣ್ಣುಗಳಿಗೆ ಬಿಟ್ಟರೆ ಮಾರನೆಯ ದಿನವೇ ಸೋಂಕು ದೂರವಾಗುತ್ತದೆ. ಅಲ್ಲದೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಕಣ್ಣುಗಳಿಗೆ ಸಂಬಂಧಿಸಿ ಬೇರ್ಯಾವುದೇ ಸಮಸ್ಯೆ ಇಲ್ಲದವರು ಇದನ್ನು ಮಾಡಬಹುದು.                                                                                                                                                                                                                                                                           ( (ವರದಿಗಾರ ಎ.ಚಿದಾನಂದ)

Related