ಧಾರವಾಡ: ಮತ್ತೊಂದು ಕೋವಿಡ್ ಪ್ರಕರಣ

ಧಾರವಾಡ: ಮತ್ತೊಂದು ಕೋವಿಡ್ ಪ್ರಕರಣ

ಧಾರವಾಡ: ಜಿಲ್ಲೆಯ ನವಲೂರಿನಲ್ಲಿ ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಕೆಮ್ಮು,ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ ನವಲೂರು ಪಠಾಣಗಲ್ಲಿಯ 26 ವರ್ಷದ (ಪಿ-673) ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಇವರು ಮುಂಬೈ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಿಗೆ ಪ್ರಯಾಣಿಸಿರುವ ಮಾಹಿತಿ ಲಭ್ಯವಾಗಿದೆ. ಇದು ಜಿಲ್ಲೆಯ 11ನೇ ಪ್ರಕರಣವಾಗಿದೆ. ಈಗಾಗಲೇ 6 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Related