ಕೋವಿಡ್ ಗರ್ಭಿಣಿಗೆ ಸಹಜ ಹೆರಿಗೆ

ಕೋವಿಡ್ ಗರ್ಭಿಣಿಗೆ ಸಹಜ ಹೆರಿಗೆ

ಮುದ್ದೇಬಿಹಾಳ : ಕೋವಿಡ್19 ಪಾಸಿಟಿವ್ ಹೊಂದಿದ್ದ ಗರ್ಭಿಣಿ ಮಹಿಳೆಯ ಹೆರಿಗೆಯನ್ನು 108 ಆರೋಗ್ಯ ಕವಚ ಸಿಬ್ಬಂದಿ ಶ್ರೀಶೈಲ್ ಹೂಗಾರ ಮಾಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ.

ತಾಲ್ಲೂಕಿನ ಹಳ್ಳೂರು ಗ್ರಾಮದ ಗರ್ಭಿಣಿ ಮಹಿಳೆ ಕೋವಿಡ್ 19 ಪಾಸಿಟಿವ್ ಹೊಂದಿದ್ದು ಆಕೆ ಹೋಮ್ ಕ್ವಾರೆಂಟೈ‌ನಲ್ಲಿದ್ದರು. ತುಂಬು ಗರ್ಭಿಣಿ ಇಂದ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಗ್ರಾಮದ ಆಶಾ ಕಾರ್ಯಕರ್ತೆ ಶರಣಮ್ಮ ಗೌಡರ 108 ಸಿಬ್ಬಂದಿಗೆ ಕರೆ ಮಾಡಿದ್ದಾರೆ.

ಕೋವಿಡ್ ಸೋಂಕಿತೆಯನ್ನು ಕರೆತರುವ ಸಂದರ್ಭವಾದರಿಂದ 108 ಆರೋಗ್ಯ ಸಿಬ್ಬಂದಿ ಶ್ರೀಶೈಲ್ ಹೂಗಾರ ಪಿಪಿಇ ಕಿಟ್ ಧರಸಿಯೇ ಹೋಗಿದ್ದರು ಮಹಿಳೆಯ ಮನೆ ತಲುಪಿದಾಗ ಹೆರಿಗೆ ನೋವಲಿದ್ದಳು ಇದನ್ನರಿತ ಶ್ರೀಶೈಲ್ ಹೂಗಾರ ಮುಂಜಾಗ್ರತೆಯ ವಹಿಸಿ ತಾವೇ ಮಹಿಳೆಯ ಹೆರಿಗೆಯನ್ನು ಸುರಕ್ಷಿತವಾಗಿ ಮಾಡಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ

Related