ಜಾಕಿ ಗಾರ್ಮೆಂಟ್ಸ್ ನಲ್ಲಿ ಕೋವಿಡ್ ಕೇಂದ್ರ 

ಜಾಕಿ ಗಾರ್ಮೆಂಟ್ಸ್ ನಲ್ಲಿ ಕೋವಿಡ್ ಕೇಂದ್ರ 

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳು ಪ್ರಾರಂಭಗೊಳ್ಳುತ್ತಿದ್ದು, ಇಂದು ಪ್ರತಿಷ್ಠಿತ ಜಾಕಿ ಗಾರ್ಮೆಂಟ್ಸ್ ನಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಶಾಸಕ ಸತೀಶ್ ರೆಡ್ಡಿಯವರು ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಕೊರೋನಾಗೆ ಯಾರು ಹೆದರುವ ಅವಶ್ಯಕತೆಯಿಲ್ಲಾ. “ನಿಮ್ಮೊಂದಿಗೆ ನಾನಿದ್ದೇನೆ” ಎಂಬ ಭರವಸೆ ನೀಡಿದರು. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸುಮಾರು 100ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನಿಮ್ಮ ಮನೆ ಬಾಗಿಲಿಗೆ ಬಂದು ಕೊರೋನಾ ಪರೀಕ್ಷೆ ಮಾಡುತ್ತೇವೆ. ಹಲವಾರು ಸ್ವಯಂ ಸೇವಕರು ಕೊರೋನಾ ವಾರಿಯರ್ರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಾರು ಹೆದರುವ ಅವಶ್ಯಕತೆ ಇಲ್ಲಾ ಎಂದು ನುಡಿದರು.

ನಂತರ ಮಾತನಾಡಿದ ಜಂಟಿ ಆಯುಕ್ತ ರಾಮಕೃಷ್ಣ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಪ್ರತಿ ದಿನ 5000ಕ್ಕೂ ಹೆಚ್ಚು ಕೊರೋನಾ ಪರೀಕ್ಷೆ ನಡೆಸುವ ಗುರಿ ಹೊಂದಿದ್ದೇವೆ. ಸುಮಾರು 1 ಲಕ್ಷಕ್ಕೂ ಅಧಿಕ ಗಾರ್ಮೆಂಟ್ಸ್ ನೌಕರರಿದ್ದು, ಗಾಮೆಂಟ್ಸ್ ಮಾಲೀಕರ ಜೊತೆ ಮಾತನಾಡಿ, ಅವರಿಗೆ ಉಚಿತ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ ಎಂದು ನುಡಿದರು. ಇದೀಗ ಕೊರೋನಾ ಮಧ್ಯೆ ಜೀವನ ಸಾಗಿಸುವ ಅನಿವಾರ್ಯತೆ ಇದ್ದು, ಜನ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದರೇ ಸಾಕೆಂದರು.

ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಸುರೇಶ್, ಡಾ. ನಾಗೇಂದ್ರಪ್ಪ ಇನ್ನಿತರ ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದರು.

Related