ಜಿಲ್ಲೆಯಲ್ಲಿ ಏಳು ಶಿಕ್ಷಕರಿಗೆ ಕೊರೋನಾ

ಜಿಲ್ಲೆಯಲ್ಲಿ ಏಳು ಶಿಕ್ಷಕರಿಗೆ ಕೊರೋನಾ

ಚಿತ್ರದುರ್ಗ : ರಾಜ್ಯದಲೇ ಶಾಲೆ ಪ್ರಾರಂಭವಾದ ನಾಲ್ಕೇ ದಿನಕ್ಕೆ ಜಿಲ್ಲೆಯ 7 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ ಎಂದು ಚಿತ್ರದುರ್ಗ ಡಿಎಚ್‌ಒ ಪಾಲಾಕ್ಷ ಹೇಳಿದರು.

ಚಳ್ಳಕೆರೆ ತಾಲೂಕಿನ ಓರ್ವ, ಹಿರಿಯೂರು ತಾಲೂಕಿನ 4, ಹೊಸದುರ್ಗ ತಾಲೂಕಿನ ಇಬ್ಬರು ಶಿಕ್ಷಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಚಿತ್ರ ನಾಯಕನಹಳ್ಳಿ, ಅರೇಹಳ್ಳಿ,ಗರಗ, ಶ್ರೀರಾಂಪುರ ಗ್ರಾಮಗಳ ಶಾಲೆಯ ಶಿಕ್ಷಕರಿಗೆ ಕೋವಿಡ್-19 ವರದಿ ಪಾಸಿಟಿವ್ ಬಂದಿದೆ.

ಜಿಲ್ಲೆಯಲ್ಲಿ ಶಾಲೆಗೆ ಹಾಜರಾಗುತ್ತಿರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ನಡುವೆ ಶಿಕ್ಷಕರಿಗೆ ಕೊರೊನಾ ದೃಢವಾಗಿರುವುದು ಮಕ್ಕಳ ಪೋಷಕರಲ್ಲಿ ಆತಂಕವನ್ನು ಮೂಡಿಸಿದೆ.

Related