ವಾಣಿಜ್ಯ ಸಿಲಿಂಡರ್‌ ಬಳಕೆದಾರರಿಗೆ ಸಿಕ್ತು ಗುಡ್ ನ್ಯೂಸ್..!

ವಾಣಿಜ್ಯ ಸಿಲಿಂಡರ್‌ ಬಳಕೆದಾರರಿಗೆ ಸಿಕ್ತು ಗುಡ್ ನ್ಯೂಸ್..!

ನವದೆಹಲಿ: ರಾಜ ಮಾತ್ರವಲ್ಲದೆ ಇಡಿ ದೇಶದಾದ್ಯಂತ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿತ್ತು ಇದರ ಮಧ್ಯೆ ಜನಸಾಮಾನ್ಯರಿಗೆ ಸಿಹಿ ಸುದ್ದಿ ಒಂದು ಸಿಕ್ಕಿದೆ.

ಹೌದು, ಸರ್ಕಾರಿ ತೈಲ ಮತ್ತು ಅಲ್ಲಿನ ಮಾರುಕಟ್ಟೆ ಕಂಪನಿಗಳು ಬೆಲೆಯನ್ನು ಸತತ ಎರಡನೇ ಬಾರಿ ಇಲಿಕೆ ಮಾಡಿವೆ.

ಇಂದಿನಿಂದ ದೇಶದ ವಿವಿಧ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 19 ರೂ.ವರೆಗೆ ಇಳಿಕೆಯಾಗಿದೆ. ಆದಾಗ್ಯೂ, ಈ ಕಡಿತದ ಪ್ರಯೋಜನವು 19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗಳ ಮೇಲೆ ಮಾತ್ರ ಲಭ್ಯವಿರುತ್ತದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಈ ಬಾರಿಯೂ ಯಾವುದೇ ಬದಲಾವಣೆಯಾಗಿಲ್ಲ.

ಇತ್ತೀಚಿನ ಬೆಲೆ ಇಳಿಕೆಯ ನಂತರ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,745.50 ರೂ.ಗೆ ಇಳಿದಿದೆ. ಅದೇ ರೀತಿ ಇಂದಿನಿಂದ ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು 1,859 ರೂ.ಗೆ ಲಭ್ಯವಾಗಲಿದೆ. ಮುಂಬೈನ ಜನರು ಈಗ ಈ ವಾಣಿಜ್ಯ ಸಿಲಿಂಡರ್‌ಗೆ ರೂ 1,698.50 ಪಾವತಿಸಬೇಕಾಗುತ್ತದೆ, ಆದರೆ, ಚೆನ್ನೈನಲ್ಲಿ ಅದರ ಬೆಲೆ ಈಗ ರೂ 1,911 ಆಗಿರುತ್ತದೆ.

 

Related