ನಾಳೆ ಶಿವಮೊಗ್ಗದಲ್ಲಿ ರಾಹುಲ್ ಅಬ್ಬರ

ನಾಳೆ ಶಿವಮೊಗ್ಗದಲ್ಲಿ ರಾಹುಲ್ ಅಬ್ಬರ

ಶಿವಮೊಗ್ಗ: ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ನಾಳೆ (ಗುರುವಾರ  ಮೇ 2) ರಂದು ಕರ್ನಾಟಕ ರಾಜ್ಯಕ್ಕೆ ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿಯವರು ಭೇಟಿ ನೀಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಪರವಾಗಿ ಅಬ್ಬರಿಸಲಿದ್ದಾರೆ.

ರಾಹುಲ್ ಗಾಂಧಿಯವರು ಶಿವಮೊಗ್ಗ ನಗರಕ್ಕೆ ನಾಳೆ ಸುಮಾರು 12 ಗಂಟೆಗೆ ಆಗಮಿಸಲಿದ್ದು, ಕಾಂಗ್ರೆಸ್ನ ಬೃಹತ್ ಸಮಾವೇಶದಲ್ಲಿ ಮಾತಾಡಿದ್ದಾರೆ ಎಂದು ಸಚಿವ ಕುಮಾರ್ ಬಂಗಾರಪ್ಪ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಡೀ ದೇಶವನ್ನು ಒಗ್ಗೂಡಿಸುವಂಥ ವ್ಯವಸ್ಥೆಯನ್ನು ನಾಲ್ಕು ಸಾವಿರ ಕಿಲೋಮೀಟರ್ ಹೆಜ್ಜೆಯನ್ನು ಇಟ್ಟಿರುವ ಒಬ್ಬ ಪುಣ್ಯಾತ್ಮ ಅವರ ಜೊತೆ ನಾವು ಹೆಜ್ಜೆ ಇಡುವುದು ನಮ್ಮ ಪುಣ್ಯವೆಂದು ಹೇಳಿದ್ದಾರೆ.

ಇದನ್ನೂ ಓದಿ: ನಮಗೆ ಆ ವಿಕೃತ ಕಾಮಿ ಮುಖ್ಯವಲ್ಲ, 2000 ಹೆಣ್ಣು ಮಕ್ಕಳ ಭವಿಷ್ಯ ಮುಖ್ಯ: ಪ್ರಕಾಶ್ ರೈ

ಇನ್ನು ರಾಷ್ಟ್ರೀಯ ಕಾಂಗ್ರೆಸ್ ನಾಯಕ ನಮ್ಮ ಶಿವಮೊಗ್ಗ ಜಿಲ್ಲೆಗೆ ಬಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರೆಂದರೆ ಅದು ಸಂತೋಷದ ವಿಷಯ ಹಾಗಾಗಿ ನಮ್ಮ ಶಿವಮೊಗ್ಗ ಜಿಲ್ಲೆಯ ಜನತೆ ಅವರನ್ನು ಭರ್ಜರಿ ಬರಮಾಡಿಕೊಳ್ಳಲಿದೆ ಎಂದು ಹೇಳಿದರು.

ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಇನ್ನೂ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿರುವುದರಿಂದ ಅ ಎಲ್ಲ ಕ್ಷೇತ್ರಗಳಿಗೆ ರಾಹುಲ್ ಅವರ ಸಂದೇಶ ಶಿವಮೊಗ್ಗದಿಂದಲೇ ಹೋಗಲಿ ಎಂಬ ಉದ್ದೇಶ ರಾಜ್ಯ ಕಾಂಗ್ರೆಸ್ ನಾಯಕರರು ಇಟ್ಟುಕೊಂಡಿದ್ದಾರೆ ಎಂದು ಮಧು ಹೇಳಿದರು.

Related