ರಾಬರ್ಟ್ ಚಿತ್ರಕ್ಕೂ ಕೊರೊನಾ ಭೀತಿ

ರಾಬರ್ಟ್ ಚಿತ್ರಕ್ಕೂ ಕೊರೊನಾ ಭೀತಿ

ಬೆಂಗಳೂರು, ಫೆ. 28: ಟ್ರೀಸರ್ ಮೂಲಕವೇ ಅಭಿಮಾನಿಗಳ ಮನಸ್ಸು ಗೆದ್ದಿರುವ ‘ರಾಬರ್ಟ್’  ಚಿತ್ರದ ಚಿತ್ರೀಕರಣವು ಭರದಿಂದ ಸಾಗುತ್ತಿದೆ.

ವಿಶ್ವದಲ್ಲಿ ಇತ್ತೀಚಿನ ದಿನಗಳಲ್ಲಿ ‘ಕೊರೊನಾ ವೈರಸ್’ ಕಾಯಿಲೆಯು ಮರಣ ಮೃದಂಗ ಬಾರಿಸುತ್ತಿದೆ. ಹೌದು, ಇದೀಗ ಕರ್ನಾಟಕದಲ್ಲಿ ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರಕ್ಕೂ ಕೊರೊನಾ ವೈರಸ್ ಭೀತಿ ಉಂಟಾಗಿದೆ.

‘ರಾಬರ್ಟ್’ ಚಿತ್ರದ ಚಿತ್ರೀಕರಣ ಇನ್ನೂ ಕಂಪ್ಲೀಟ್ ಆಗಿಲ್ಲ. ಕೆಲದಿನಗಳ ಹಿಂದೆ ಚಿತ್ರತಂಡ ವಾರಣಾಸಿಗೆ ಹೋಗಿ ಶೂಟಿಂಗ್ ಮಾಡಿಕೊಂಡು ಬಂದಿತ್ತು. ಇನ್ನೂ ಕೆಲ ಹಾಡುಗಳ ಚಿತ್ರೀಕರಣ ಬಾಕಿಯಿದೆ. ಆ ಹಾಡಿನ ಶೂಟಿಂಗ್ಗಾಗಿ ಚಿತ್ರತಂಡ ವಿದೇಶಗಳಿಗೆ ಹೋಗಬೇಕಾಗಿತ್ತು. ಆದರೆ ವಿದೇಶದಲ್ಲಿ ಕೊರೊನಾ ವೈರಸ್, ತನ್ನ ಪ್ರತಾಪವನ್ನು ತೋರಿಸುತ್ತಿರೋದರಿಂದ ‘ರಾಬರ್ಟ್’ ಚಿತ್ರತಂಡ ಶೂಟಿಂಗ್ ಕ್ಯಾನ್ಸಲ್ ಮಾಡಿದೆ.

 

Related