ಕಾಂಗ್ರೆಸ್ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ: ಸತೀಶ್ ರೆಡ್ಡಿ

ಕಾಂಗ್ರೆಸ್ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ: ಸತೀಶ್ ರೆಡ್ಡಿ

ಬೆಂಗಳೂರು: ದಲಿತ ಬಂಧುಗಳಿಗೆ ಈಗಾಗಲೇ ನಾವು ಸಾವಿರಾರು ಮನೆಗಳನ್ನು ಕಟ್ಟಿಕೊಟ್ಟಿದ್ದೇವೆ, ಅನೇಕ ಯೋಜನೆಗಳನ್ನು ನನ್ನ ಕ್ಷೇತ್ರದಲ್ಲಿ ಮಾಡಿದ್ದೇನೆ.

ದಲಿತರು ಈಗ ಕಾಂಗ್ರೆಸ್ಸಿಗರಿಗೆ ಮತ ಹಾಕುತ್ತಿಲ್ಲ. ಹೇಗಾದರೂ ಮಾಡಿ ಕಾಂಗ್ರೆಸ್ನವರು ದಲಿತರ ಮತಗಳನ್ನು ಪಡೆಯಬೇಕೆಂಬ ದುರಾಲೋಚನೆಯಿಂದ ದಲಿತರನ್ನು ಎದುರಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎನ್ ಸತೀಶ್ ರೆಡ್ಡಿ ಅವರು ಹೇಳಿದರು.

ಅವರು ಇಂದು ಬೊಮ್ಮನಹಳ್ಳಿಯಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿಗರಿಗೆ ಒಂದು ಅಂಬೇಡ್ಕರ್ ಜಯಂತಿಯನ್ನು ಮಾಡುವ ಯೋಗ್ಯತೆ ಇಲ್ಲ. ಇವತ್ತು ನಾವು ಸಾವಿರಾರು ಜನ ದಲಿತರನ್ನು ಸೇರಿಸಿ ಅಂಬೇಡ್ಕರ್ ಜಯಂತಿಯನ್ನು ಪ್ರತಿ ವರ್ಷ ನಾವು ಮಾಡುತ್ತಾ ಬಂದಿದ್ದೇವೆ.

ಕಾಂಗ್ರೆಸ್ನವರು ಇಂದು ಯಾರಾದರೂ ದಲಿತ ಬಂಧುಗಳು ಕರೆದರೆ ಅಂಬೇಡ್ಕರ್ ಜಯಂತಿಗೂ ಅವರ ಜೊತೆ ಕಾಂಗ್ರೆಸ್ನವರು ಹೋಗಿಲ್ಲ. ಇದಕ್ಕೆ ಕಾರಣ ಇಷ್ಟೇ ಅಂಬೇಡ್ಕರನ್ನು ಸೋಲಿಸಿದವರು ಯಾರು? ಕಾಂಗ್ರೆಸ್ನವರು ಸೋಲಿಸಿದ್ದು.

ನೆನ್ನೆ ಬಿ ಎಸ್ ಬಿ ಯ ಮಾಯಾವತಿಯವರ ಸಭೆಯಲ್ಲಿ ಹೇಳಿದ್ದಾರೆ, ಯಾವ ಕಾರಣಕ್ಕೂ ಕಾಂಗ್ರೆಸ್ಗೆ ಕ್ಷಮೆ ಇಲ್ಲ ಅಂಬೇಡ್ಕರನ್ನು ಸೋಲಿಸಿದ್ದು ಆಗಿನ ಲೋಕಸಭಾ ಕಾಂಗ್ರೆಸ್. ಆದ ಕಾರಣ ಯಾವ ದಲಿತ ಬಂಧುಗಳು ಕಾಂಗ್ರೆಸ್ಸಿಗೆ ಮತ ನೀಡಬಾರದೆಂದು ಹೇಳಿದ್ದಾರೆ.

ಇನ್ನು ಬೊಮ್ಮನಹಳ್ಳಿ ಕ್ಷೇತ್ರದಲ್ಲಿಗುಂಡಾಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅವರೇ ಇದಕ್ಕೆ ಬೆಲೆಯನ್ನು ಕಟ್ಟಬೇಕಾಗುತ್ತದೆ. ಯಾಕೆಂದರೆ ಕ್ಷೇತ್ರದಲ್ಲಿ ಶಾಂತಿಯನ್ನು ಕದಡುವ ಒಬ್ಬ ಅಭ್ಯರ್ಥಿ ಠೇವಣಿಯನ್ನು ಕಳೆದುಕೊಳ್ಳುತ್ತಾರೆ ಎಂದು ಈ ಸಂದರ್ಭದಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.

ನಮ್ಮ ಭಾಗದಲ್ಲಿ ದಲಿತರ ಮಾತ್ರವಲ್ಲ ಎಲ್ಲಾ ಜಾತಿಯವರು ನನ್ನ ಜೊತೆಗಿರುವುದರಿಂದ ನಾನು ಮತ್ತೆ ಬೊಮ್ನಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬರುತ್ತೇನೆ ಎಂದು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

 

Related