ಕುಸಿದು ಬಿದ್ದ ಸಿದ್ದು

ಕುಸಿದು ಬಿದ್ದ ಸಿದ್ದು

ಕೂಡ್ಲಿಗಿ: ಕಾರು ಹತ್ತುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕುಸಿದು ಬಿದ್ದಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿನಲ್ಲಿ ನಡೆದಿದೆ. ಕೂಡ್ಲಿಗಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್ ಶ್ರೀನಿವಾಸ್ ಪರ ಪ್ರಚಾರಕ್ಕೆ ಆಗಮಿಸಿದ್ದವೇಳೆ ಸಿದ್ದರಾಮಯ್ಯ, ಕಾರು ಹತ್ತುವ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರಿಗೆ ಗ್ಲುಕೋಸ್ ನೀಡಿ ವೈದ್ಯರಿಂದ ಉಪಚಾರ ಮಾಡಲಾಗಿದೆ.

ಬೆಳಗ್ಗೆ ಕೂಡ್ಲಿಗಿ, ಮಧ್ಯಾನ್ಹ ಹರಪನಹಳ್ಳಿ, ಸಂಜೆ ನಾಲ್ಕು ಗಂಟೆಗೆ ಹಗರಿಬೊಮ್ಮನ ಹಳ್ಳಿ, ರಾತ್ರಿ 7 ಕ್ಕೆ ಹೊಸಪೇಟೆಯಲ್ಲಿ ಅದ್ದೂರಿ ಪ್ರಚಾರ ಸಿದ್ದರಾಮಯ್ಯ ನಡೆಸಲಿದ್ದರು. ಈ ಹಿನ್ನೆಲೆಯಲ್ಲಿ ಕೂಡ್ಲಿಗಿಗೆ ಸಿದ್ದರಾಮಯ್ಯ ಬಳ್ಳಾರಿ ರಸ್ತೆಯಲ್ಲಿರೋ ಹೆಲಿಪ್ಯಾಡ್​ನಲ್ಲಿ ಬಂದಿಳಿದ ಮಾಜಿ ಸಿದ್ದರಾಮಯ್ಯ ಬಂದಿಳಿದಿದ್ದರು.

ಕೂಡ್ಲಿಗಿಯಲ್ಲಿ ಬಿಸಿಲಿನ ತಾಪಕ್ಕೆ ಕ್ಷಣಮಾತ್ರದಲ್ಲಿ ಸಿದ್ದರಾಮಯ್ಯ ಕುಸಿದು ಬಿದ್ದಿದ್ದಾರೆ. ಕೂಡ್ಲಿಗಿಯ ಹೆಲಿಪ್ಯಾಡ್ ಬಳಿ ಕಾರಿನ ಬಾಗಿಲಿನ ಬಳಿ ಏಕಾಏಕಿ ಸಿದ್ದರಾಮಯ್ಯ ಕುಸಿದು ಬೀಳುತ್ತಿದ್ದಂತೆಯೇ ಕೈ ಹಿಡಿದ ವೈದ್ಯ ಗ್ಲೂಕೋಸ್, ನೀರು ಕುಡಿಸಿದ್ದಾರೆ. ಅಭ್ಯರ್ಥಿ ಡಾ.ಶ್ರೀನಿವಾಸ್ ಈಗ ಸಿದ್ದರಾಮಯ್ಯರ ಆರೈಕೆ ಮಾಡುತ್ತಿದ್ದಾರೆ.

Related