ಪತ್ನಿಗಾಗಿ ಖಾದಿ ಸೀರೆ ಖರೀದಿಸಿದ ಸಿಎಂ

ಪತ್ನಿಗಾಗಿ ಖಾದಿ ಸೀರೆ ಖರೀದಿಸಿದ ಸಿಎಂ

ಬೆಂಗಳೂರು : ಶನಿವಾರ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಖಾದಿ ಎಂಪೋರಿಯಂಗೆ ಭೇಟಿ ನೀಡಿದರು.

ಸಿಎಂ ಬಸವರಾಜ್ ಬೊಮ್ಮಾಯಿ, ಖಾದಿ ಎಂಪೋರಿಯಂ ನಲ್ಲಿ ಪತ್ನಿಗಾಗಿ ಭರ್ಜರಿ ಸೀರೆ ಖರೀದಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಮೂರು ಸೀರೆಯಲ್ಲಿ ಒಂದನ್ನು ಆಯ್ಕೆ ಮಾಡಿದ ಸಿಎಂ ಪತ್ನಿಗೆ ಸೀರೆ ಖರೀದಿಸಿದರು. ಇದೇ ವೇಳೆ ತಮ್ಮೊಂದಿಗೆ ಇದ್ದ ಸಚಿವರಾದ ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್ ಹಾಗೂ ವಿಜಯೇಂದ್ರ ಅವರಿಗೂ ಮನೆಯವರಿಗೆ ಸೀರೆ ಖರೀದಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಚಿವ ಕಾರಜೋಳ, ಎಂಟಿಬಿ ಹಾಗೂ ವಿಜಯೇಂದ್ರ ಕೂಡ ಸೀರೆ ಖರೀದಿಸಿದ್ದು, ಬಿ.ವೈ. ವಿಜಯೇಂದ್ರ 4 ಸಾವಿರ ರೂ. ಮೌಲ್ಯದ ಸೀರೆ ಖರೀದಿಸಿದ್ದಾರೆ. ಸಿಎಂ ಬೊಮ್ಮಾಯಿ ಒಟ್ಟು 16,031 ರೂ. ಮೌಲ್ಯದ ಸೀರೆ ಖರಿದಿ ಮಾಡಿದರು.

Related