ಕ್ರಿಸ್ ಕೈರ್ನ್ಸ್ ಆರೋಗ್ಯ ಸ್ಥಿತಿ ಗಂಭೀರ

  • In Sports
  • August 10, 2021
  • 364 Views
ಕ್ರಿಸ್ ಕೈರ್ನ್ಸ್ ಆರೋಗ್ಯ ಸ್ಥಿತಿ ಗಂಭೀರ

 

ನವದೆಹಲಿ : ನ್ಯೂಜಿಲೆಂಡ್ ಮಾಜಿ ಆಲ್ ರೌಂಡರ್ ಕ್ರಿಸ್ ಕೇರ್ನ್ಸ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅಪಧಮನಿಯ ಒಳ ಪದರವು ಹರಿದು ಹೋಗಿದ್ದು ಅವರನ್ನ ಕ್ಯಾನ್ಬೆರಾದ ಆಸ್ಪತ್ರೆಗೆ ದಾಖಲಿಸಿ ಹಲವು ಶಸ್ತ್ರಚಿಕಿತ್ಸೆಗಳನ್ನು ನೀಡಲಾಗಿತ್ತು. ಆದರೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಾರದ ಕಾರಣ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
51 ವರ್ಷದ ಕೇರ್ನ್ಸ್ ಪ್ರಸ್ತುತ ಕ್ಯಾನ್ಬೆರಾದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಅವರನ್ನು ಶೀಘ್ರವೇ ಸಿಡ್ನಿಗೆ ಸ್ಥಳಾಂತರಿಸಲಾಗುವುದು ಎನ್ನುವ ಮಾಹಿತಿ ನೀಡಲಾಗಿದೆ.
ಕೇರ್ನ್ಸ್ ಇಂಗ್ಲೆಂಡ್ ಪರ 62 ಟೆಸ್ಟ್ ಮತ್ತು 215 ಏಕದಿನ ಪಂದ್ಯಗಳನ್ನ ಆಡಿದ್ದಾರೆ. ವಿಶ್ವದ ಅತ್ಯುತ್ತಮ ಆಲ್‍ರೌಂಡರ್ ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿತ್ತು. ಇನ್ನು 2004ರಲ್ಲಿ ಆಲ್ರೌಂಡರ್ ಆಗಿ 200 ವಿಕೆಟ್ ಕಬಳಿಸಿದರು. 3,000 ರನ್ ಗಳಿಸಿದ ಆರನೇ ಆಟಗಾರರಾಗಿದ್ದಾರೆ.

Related