ಚೆಕ್ ಪೋಸ್ಟ್ ಸಿಬ್ಬಂದಿಗೆ ಜಿಲ್ಲಾಧಿಕಾರಿ ಕಟ್ಟೆಚ್ಚರ

  • In State
  • August 4, 2021
  • 327 Views
ಚೆಕ್ ಪೋಸ್ಟ್ ಸಿಬ್ಬಂದಿಗೆ ಜಿಲ್ಲಾಧಿಕಾರಿ ಕಟ್ಟೆಚ್ಚರ

ವಿಜಯಪುರ :ಮಹಾರಾಷ್ಟ್ರ  ಗಡಿಭಾಗದ ಚಡಚಣ ತಾಲೂಕಿನ, ಶಿರಾಡೋಣ, ಉಮದಿ, ಧೂಳಖೇಡ ಕೋವಿಡ್   ಚೆಕ್ ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಬುಧವಾರ ಭೇಟಿ ನೀಡಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
” ನೆರೆಯಲ್ಲಿ ಕೊವಿಡ್ ಪ್ರಕರಣ ಹೆಚ್ಚಿದು ಗಡಿಯ ಜನರು ಜಾಗೃತರಾಗಬೇಕು. ನೆರೆ ರಾಜ್ಯದಿಂದ ಆಗಮಿಸುವ ಜನರು 72 ಗಂಟೆಯೊಳಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಹೊಂದಿದರೆ ಮಾತ್ರ ಜಿಲ್ಲೆಯಲ್ಲಿ ಬರಲು ಅವಕಾಶ ಮಾಡಿಕೊಡಿ. ಇಲ್ಲವಾದರೆ ಮರಳಿ ಕಳುಹಿಸಿಕೊಡಿ. ಲಸಿಕೆ ಪಡೆದುಕೊಳ್ಳದವರಿಗೆ ಕೂಡಲೇ ಲಸಿಕೆ ಹಾಕಬೇಕು” ಎಂದು ತಾಲ್ಲೂಕು ವೈಧ್ಯಾಧಿಕಾರಿ ಅರ್ಚನಾಗೆ ಸೂಚಿಸಿದರು. ಇಂಡಿ ಎ.ಸಿ ರಾಹುಲ್ ಸಿಂಧೆ, ಚಡಚಣ ತಹಶೀಲ್ದಾರ್ ಸುರೇಶ್ ಚವಲರ, ತಾ.ಪಂ. ಇ.ಓ ಸಂಜಯ್ ಖಡಗೇಕರ, ತಾ. ಆರೋಗ್ಯ ಅಧಿಕಾರಿ ಅರ್ಚನಾ, ಕಂದಾಯ ನಿರೀಕ್ಷಕರು, ಚಡಚಣ ಪಿಎಸ್‌ಐ ಮಲ್ಲು ಸತೀಗೌಡರ, ಡಾ. ಜಾನ್ ಕಟವಟಿ. ಪೂರ್ಣಿಮ ಹಿರೇಮಠ(ಲ್ಯಾಬ್) ಇನ್ನಿತರರಿದ್ದರು.

Related