ಯುಗಾದಿಯ ಕಲಾತೀತ ಸೊಬಗನ್ನು ಪ್ಲಾಟಿನಂ ಆಭರಣದ ಜೊತೆಗೆ ಆಚರಿಸಿ

ಯುಗಾದಿಯ ಕಲಾತೀತ ಸೊಬಗನ್ನು ಪ್ಲಾಟಿನಂ ಆಭರಣದ ಜೊತೆಗೆ ಆಚರಿಸಿ

ಬೆಂಗಳೂರು: ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್‌ನ ಆರಂಭಿಕ ತಿಂಗಳಾದ ಚೈತ್ರ ಮಾಸದ ಮೊದಲ ದಿನದಂದು ಯುಗಾದಿ ಆಚರಿಸಲಾಗುತ್ತದೆ. ಯುಗಾದಿಯು ವಸಂತ ಋತುವಿನ ಆಗಮನವನ್ನೂ ಸೂಚಿಸುತ್ತದೆ. ದಕ್ಷಿಣದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ಹಿಂದೂ ಹೊಸ ವರ್ಷದ ಆರಂಭದ ದಿನವನ್ನು ಯುಗಾದಿ ಹಬ್ಬವಾಗಿ ಆಚರಿಸುತ್ತವೆ. ಈ ಸಂದರ್ಭವನ್ನು ಹೊಸ ಆರಂಭ ಎಂದೂ ಕರೆಯಲಾಗುತ್ತದೆ. ಈ ವಿಶೇಷ ದಿನದ ಬೆಳಗ್ಗೆ ಕುಟುಂಬಗಳು ಜೊತೆಗೂಡಿ ಸಾಂಪ್ರದಾಯಿಕ ಎಣ್ಣೆ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯಗಳು, ಮನೆಗಳು ಮತ್ತು ಅಂಗಡಿಗಳ ಪ್ರವೇಶದ್ವಾರವನ್ನು ಹೂವು ಮತ್ತು ಮಾವಿನ ಎಲೆಗಳ ತೋರಣದಿಂದ ಅಲಂಕಾರ ಮಾಡುತ್ತಾರೆ.

ಯುಗಾದಿಯು ಹೊಸ ಆರಂಭವನ್ನು ಸೂಚಿಸುವ ಹಬ್ಬ ಆಗಿರುವುದರಿಂದ ಅವತ್ತು ಈ ಸಂದರ್ಭದ ಕಾಲಾತೀತ ಮತ್ತು ಅಮೂಮ್ಯ ಗುಣವನ್ನು ಪ್ರತಿಬಿಂಬಿಸುವ ಉಡುಗೊರೆಗಳನ್ನು ನೀಡಲಾಗುತ್ತದೆ. ಈ ಭಾವನೆಗಳನ್ನು ದಾಟಿಸಲು ಶುದ್ಧವಾದ ಮತ್ತು ಅಮೂಲ್ಯವಾದ ಪ್ಲಾಟಿನಮ್ ಉಡುಗೊರೆಗಿಂತ ಉತ್ತಮ ಮಾರ್ಗ ಯಾವುದಿದೆ? ಶ್ವೇತ ಬಣ್ಣದ ಹೊಳಪು ಮತ್ತು ಆಕಾರವನ್ನು ಹೊಂದಿರುವ ಈ ಅಪೂರ್ವ ಲೋಹವು ದಿವ್ಯವಾಗಿದೆ. ಸ್ಥಿರತೆಗೆ ಹೆಸರುವಾಸಿಯಾಗಿದೆ ಮತ್ತು ಪುನರಾವರ್ತಿತ ಬಳಕೆಗೆ ಸೂಕ್ತವಾಗಿದೆ.

ಯುಗಾದಿ ಹಬ್ಬದ ಸಮಯದಲ್ಲಿ ಆಭರಣಗಳನ್ನು ಖರೀದಿಸಲು ಅಥವಾ ಉಡುಗೊರೆಯಾಗಿ ನೀಡಲು ಬಯಸುವವರಿಗೆ ಶೇ.95 ಶುದ್ಧತೆ ಹೊಂದಿರುವ ಪ್ಲಾಟಿನಂ ಆಭರಣಗಳು ಸೂಕ್ತ ಆಯ್ಕೆಯಾಗಿದೆ. ದೀರ್ಘಕಾಲದ ಬಾಳಿಕೆ ಮತ್ತು ವೈವಿಧ್ಯಮಯತೆಗೆ ಖ್ಯಾತಿ ಹೊಂದಿರುವ ಪ್ಲಾಟಿನಂ ನಿರಂತರ ಪ್ರೀತಿ ಮತ್ತು ಬದ್ಧತೆಯ ಸಂಕೇತವೂ ಹೌದು. ಸೊಗಸಾದ ಪೆಂಡೆಂಟ್ ಆಗಿರಲಿ, ಅತ್ಯಾಕರ್ಷಕ ಉಂಗುರವಾಗಲಿ ಅಥವಾ ಅತ್ಯಾಧುನಿಕ ಬ್ರೇಸ್ ಲೆಟ್ ಆಗಲಿ ಹೀಗೆ ಎಲ್ಲಾ ಥರದ ಪ್ಲಾಟಿನಂ ಉಡುಗೊರೆಗಳು ನಿಮ್ಮ ಪ್ರೀತಿಪಾತ್ರರಲ್ಲಿ ಶಾಶ್ವತ ಪರಿಣಾಮ ಉಂಟು ಮಾಡಲಿದೆ.

ಈ ಎಲ್ಲಾ ಕಾರಣಗಳಿಂದ ಈ ಯುಗಾದಿಯನ್ನು ಕಾಲಾತೀತ ಸೊಬಗು ಹೊಂದಿರುವ ಪ್ಲಾಟಿನಂ ಆಭರಣಗಳ ಜೊತೆ ಆಚರಿಸಿ ಮತ್ತು ಹೊಸ ವರ್ಷವನ್ನು ಸ್ವಾಗತಿಸಿ. ಅಮೂಲ್ಯವಾದ ಮತ್ತು ಅಪರೂಪದ ಲೋಹವಾದ ಪ್ಲಾಟಿನಂ ಉಡುಗೊರೆ ನೀಡುವ ಮೂಲಕ ಹೊಸ ವರ್ಷವನ್ನು ಸಂಭ್ರಮಿಸಿ.

ಪ್ಲಾಟಿನಂ ಗಿಲ್ಡ್ ಇಂಟರ್‌ನ್ಯಾಶನಲ್-ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಬ್ಯಾನರ್ಜಿ, “ಯುಗಾದಿ ಸಂದರ್ಭವನ್ನು ಎದುರುಗೊಳ್ಳಲು ಗ್ರಾಹಕರು ಉತ್ಸುಕರಾಗಿದ್ದಾರೆ. ಸಮೃದ್ಧಿ ಮತ್ತು ಅದೃಷ್ಟ ತರಬಹುದಾದ ಯುಗಾದಿ ಸಂದರ್ಭದಲ್ಲಿ ಪ್ರಾಟಿನಂ ಆಭರಣಗಳ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ರಿಟೇಲ್ ಅಂಗಡಿಗಳಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಭೇಟಿ ನೀಡುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.

ಜಿಆರ್‌ಟಿ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಜಿ.ಆರ್. ‘ಆನಂದ್’ ಅನಂತಪದ್ಮನಾಭನ್ ಮಾತನಾಡಿ, “ಯುಗಾದಿಯು ಭರವಸೆ, ಸಕಾರಾತ್ಮಕ ಭಾವ ಮತ್ತು ಸಂತೋಷ ನೀಡುವ ಹಬ್ಬವಾಗಿದೆ ಮತ್ತು ಕುಟುಂಬಗಳು, ಪ್ರೀತಿಪಾತ್ರರನ್ನು ಒಟ್ಟುಗೂಡಿಸುತ್ತದೆ. ಹಬ್ಬದ ಸಂದರ್ಭದಲ್ಲಿ ಆಭರಣ ಉಡುಗೊರೆ ಕೊಡುವುದು ಸಾಮಾನ್ಯವಾಗಿದೆ. ಈ ಬಾರಿ ನಾವು ಪ್ಲಾಟಿನಂ ಬೇಡಿಕೆ ಹೆಚ್ಚಿರುವುದನ್ನು ನೋಡುತ್ತಿದ್ದೇವೆ. ಅಪರೂಪದ ಮತ್ತು ಬೆಲೆಬಾಳುವ ಪ್ಲಾಟಿನಂ ಆಭರಣಗಳು ಸಾಂಪ್ರದಾಯಿಕ ಉಡುಗೆಗಳಿಂದ ಹಿಡಿದು ಪಾಶ್ಚಿಮಾತ್ಯ ಉಡುಪುಗಳವರೆಗೆ ಮತ್ತು ದೈನಂದಿನ ಕ್ಯಾಶುಯಲ್ ಉಡುಗೆಗಳನ್ನು ಒಳಗೊಂಡು ಎಲ್ಲಾ ವಿಧದ ದಿರಿಸುಗಳ ಜೊತೆಗೂ ಹೊಂದಿಕೊಳ್ಳುತ್ತದೆ. ಪುರುಷರಿಗೆ ಖಡಗಳಿಂದ ಹಿಡಿದು ಚಂದದ ಪೆಂಡೆಂಟ್‌ಗಳು ಮತ್ತು ಉಂಗುರಗಳು ಲಭ್ಯವಿದೆ. ಮಹಿಳೆಯರಿಗೆ ಸೊಗಸಾದ ನೆಕ್ಲೇಸ್‌ಗಳು, ಸುಂದರವಾದ ಬ್ರೇಸ್ ಲೆಟ್ ಗಳು ಮತ್ತು ಕಿವಿಯೋಲೆಗಳು ದೊರೆಯುತ್ತವೆ” ಎಂದು ಹೇಳಿದರು.

ಜಿಆರ್‌ಟಿ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿ.ಆರ್. ರಾಧಾಕೃಷ್ಣನ್ ಮಾತನಾಡಿ, “ಯುಗಾದಿಯು ಹೊಸ ಆರಂಭವನ್ನು ಶುರು ಮಾಡುವ ದಿನ. ಈ ಸಂದರ್ಭದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಆಭರಣ ಕೊಡುಗೆ ನೀಡುವುದು ಸಹಜ. ಈಗಾಗಲೇ ಖರೀದಿ ಆರಂಭವಾಗಿದ್ದು. ಪುರುಷರಿಗೆ ಪ್ಲಾಟಿನಂ ಸರಗಳು ಮತ್ತು ಆಕರ್ಷಕ ಪ್ಲಾಟಿನಂ ಕಡಗಳು ಸೇರಿದಂತೆ ಹಲವು ಪ್ಲಾಟಿನಂ ಆಭರಣಗಳು ಲಭ್ಯವಿದೆ. ಅವುಗಳು ಗ್ರಾಹಕರ ಮನ ಸೆಳೆದಿವೆ” ಎಂದು ಹೇಳಿದರು.

ಕಲ್ಯಾಣ್ ಜ್ಯುವೆಲ್ಲರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಕಲ್ಯಾಣರಾಮನ್ ಮಾತನಾಡಿ, “ಯುಗಾದಿ ಹೊಸ ಆರಂಭ ಮತ್ತು ಸಮೃದ್ಧಿಯ ಸಂಕೇತ. ಗ್ರಾಹಕರು ಈಗಾಗಲೇ ತಮ್ಮ ಪ್ರೀತಿ ಪಾತ್ರರಿಗೆ ಆಭರಣ ಖರೀದಿ ಶುರುಮಾಡಿದ್ದಾರೆ. ಅದರಲ್ಲೂ ಪ್ಲಾಟಿನಂ ಅವರ ಆದ್ಯತೆಯಾಗಿದೆ. ಪ್ಲಾಟಿನಂ ಆಭರಣಗಳು ಯುವ ಗ್ರಾಹಕರ ಫೇವರಿಟ್ ಆಗಿದೆ. ಈ ಮೂಲಕ ಯುಗಾದಿಯ ಅರ್ಥಪೂರ್ಣ ಆಚರಣೆಗೆ ಪ್ಲಾಟಿನಂ ಕೊಡುಗೆ ಹೆಚ್ಚು ಇರಲಿದೆ” ಎಂದು ಹೇಳಿದರು.

ಜೋಯಾಲುಕ್ಕಾಸ್ ಗ್ರೂಪ್ ಅಧ್ಯಕ್ಷ ಜಾಯ್ ಅಲುಕ್ಕಾಸ್ ಮಾತನಾಡಿ, “ಯುಗಾದಿಯು ಹೊಸ ವರ್ಷದ ಆರಂಭ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ. ಸಮೃದ್ಧಿ ಮತ್ತ ಅದೃಷ್ಟವನ್ನು ಸಂಕೇತಿಸುವ ಈ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಪ್ಲಾಟಿನಂ ಆಭರಣಗಳ ಮೇಲಿನ ಬೇಡಿಕೆ ಹೆಚ್ಚಾಗಿರುವುದನ್ನು ನಾವು ಗಮನಿಸಿದ್ದೇವೆ. ಪ್ಲಾಟಿನಂ ತನ್ನ ವಿಶೇಷ ಗುಣಗಳಿಂದ ಗ್ರಾಹಕರ ಮನ ಸೆಳೆಯಲು ಯಶಸ್ವಿಯಾಗಿದೆ. ಈ ಯುಗಾದಿಯಲ್ಲಿ ಅಮೂಲ್ಯ ಲೋಹದಿಂದ ರಚಿಸಲಾದ ಪ್ಲಾಟಿನಂ ಆಭರಣಗಳು ಕೇಂದ್ರಬಿಂದುವಾಗಿರಲಿದೆ” ಎಂದು ಹೇಳಿದರು.

Related