ಹೆಚ್ಚುವರಿ ಸಾಲದಿಂದ ವಿತ್ತೀಯ ಕೊರತೆ ಶೇ. 6.9 ಏರಿಕೆ..

ನವದೆಹಲಿ(ಮೇ.23): ಕೇಂದ್ರ ಸರ್ಕಾರವು ಪೆಟ್ರೋಲ್ಹಾಗೂ ಡೀಸೆಲ್ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದ ಬೆನ್ನಲ್ಲೇ ಇದರಿಂದ ಸರ್ಕಾರದ ಆದಾಯಕ್ಕಾದ ನಷ್ಟವನ್ನು ಸರಿದೂಗಿಸಲು ಸುಮಾರು 1 ಲಕ್ಷ ಕೋಟಿ ರು. ಹೆಚ್ಚುವರಿ ಸಾಲವನ್ನು ಪಡೆದುಕೊಳ್ಳಲು ಮುಂದಾಗಬಹುದು ಎಂದು ಮೂಲಗಳು ತಿಳಿಸಿವೆ.


ಸರ್ಕಾರವು ಬಡವರಿಗೆ ಹಾಗೂ ರೈತರಿಗೆ ಆಹಾರ ಹಾಗೂ ರಸಗೊಬ್ಬರದ ಮೇಲೆ ನೀಡುತ್ತಿರುವ ಸಹಾಯಧನದ ವೆಚ್ಚವು ಕೇಂದ್ರದ 2 ಪ್ರಮುಖ ಆದಾಯದ ಮೂಲಗಳಾದ ಸರಕು ಹಾಗೂ ಸೇವೆಗಳ ತೆರಿಗೆ ಹಾಗೂ ವೈಯಕ್ತಿಕ ಆದಾಯ ತೆರಿಗೆಯಿಂದ ಬಂದ ಆದಾಯಕ್ಕೆ ಸಮನಾಗಿದೆ. ಹೀಗಾಗಿ ಅಬಕಾರಿ ಸುಂಕದ ಕಡಿತದಿಂದಾದ ನಷ್ಟವನ್ನು ಸರಿದೂಗಿಸಿಕೊಳ್ಳಲು ಹೆಚ್ಚುವರಿ ಸಾಲವನ್ನು ಪಡೆದುಕೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಕೇಂದ್ರ ಹೆಚ್ಚುವರಿ ಸಾಲದ ಮೊತ್ತವನ್ನು ದೇಶಿಯ ಕರೆನ್ಸಿ ರೂಪದಲ್ಲೇ ಬ್ಯಾಂಕ್ ಹಾಗೂ ವಿಮಾ ಕಂಪನಿಗಳಿಂದ ಸರ್ಕಾರ ಪಡೆದುಕೊಳ್ಳಲು ಮುಂದಾಗಬಹುದು ಎನ್ನಲಾಗಿದೆ. ಇದು 2022-23ರ ಆರ್ಥಿಕ ವರ್ಷದಲ್ಲಿ ದೇಶದ ವಿತ್ತೀಯ ಕೊರತೆಯ ಪ್ರಮಾಣವನ್ನು ಶೇ.6.9ಕ್ಕೆ ಏರಿಕೆ ಮಾಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Related