ಘಟಪ್ರಭಾ ನದಿ ತೀರದ ಗ್ರಾಮಕ್ಕೆ ಬೋಟಿನ ವ್ಯವಸ್ಥೆ

  • In State
  • August 1, 2021
  • 317 Views
ಘಟಪ್ರಭಾ ನದಿ ತೀರದ ಗ್ರಾಮಕ್ಕೆ ಬೋಟಿನ ವ್ಯವಸ್ಥೆ

ಮಹಾಲಿಂಗಪುರ – ರಬಕವಿ ಬನಹಟ್ಟಿ ತಾಲೂಕಿನ ನಂದಗಾವ ಗ್ರಾಮಕ್ಕೆ ಸ್ಥಳೀಯ ಶಾಸಕ ಸಿದ್ದು ಸವದಿ ಮುತ್ತುವರ್ಜಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಘಟಪ್ರಭಾ ನದಿಗೆ ಬೋಟಿನ ವ್ಯವಸ್ಥೆ ನೆರವೇರಿದೆ.
ಪ್ರತಿವರ್ಷ ಮಳೆಗಾಲ ಹಾಗೂ ವಾಯುಭಾರ ಕುಸಿತದಿಂದ ಘಟಪ್ರಭಾ ತೀರದ ಬಾಗಲಕೋಟ ಹಾಗೂ ಬೆಳಗಾವಿ ಜಿಲ್ಲೆ, ಗ್ರಾಮ, ಪಟ್ಟಣಗಳ ಸಂಪರ್ಕ ಸಂಪೂರ್ಣ ಕಡಿದು ಹೋಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಇನ್ನಿತರ ಕಾರಣಗಳಿಗಾಗಿ ಸಂಚರಿಸುವ ಸಾರ್ವಜನಿಕರು ಸಂಪರ್ಕ ಸಾಧನವಿಲ್ಲದೆ ತೊಂದರೆ ಅನುಭವಿಸುತ್ತಿದ್ದರು.
ಎರಡೂ ತೀರದ ಗ್ರಾಮಸ್ಥರು ಬಹಳ ವರ್ಷಗಳಿಂದ ಬೋಟ್ ವ್ಯವಸ್ಥೆಗಾಗಿ ತಾಲೂಕು, ಜಿಲ್ಲಾ ಆಡಳಿತಕ್ಕೆ ಮೇಲಿಂದ ಮೇಲೆ ಮನವಿಯನ್ನು ಸಲ್ಲಿಸುತ ಬಂದಿದ್ದರೂ ಬೇಡಿಕೆ ಮರೀಚಿಕೆಯಾಗಿಯೇ ಉಳಿದಿತು. ಎಲ್ಲದಕ್ಕೂ ಕಾಲವೇ ಕೂಡಿಬರಬೇಕು ಎನ್ನುವಂತೆ ಅಂದಿನ ಕೂಗಿಗೆ ಜು.31ರಂದು ತೇರದಾಳ ಶಾಸಕ ಸಿದ್ದು ಸವದಿ ನೆರವಿನೊಂದಿಗೆ ಗ್ರಾಮಕ್ಕೆ ಸ್ವಯಂ ಚಾಲಿತ ಬೋಟ್ ವ್ಯವಸ್ಥೆ ನೆರವೇರಿದೆ.
ಪೂಜೆ ನೆರವೇರಿಸಿದ ಗ್ರಾಮಸ್ಥರು ವ್ಯವಸ್ಥೆಗೆ ಹರ್ಷ ವ್ಯಕ್ತಪಡಿಸಿ ಶಾಸಕರ ಈ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಘಟಪ್ರಭಾ ಉದ್ದಗಲಕ್ಕೂ ಸಂಚಾರಿಸಿ ಇನ್ನು ಪ್ರವಾಹ ಬಂದರೂ ನಮ್ಮ ಸಂಚಾರಕ್ಕೆ ಯಾವುದೇ ಅಡೆತಡೆ ಇಲ್ಲವೆಂಬ ಭಾವ ಎಲ್ಲರ ಮುಖದಲ್ಲಿಯೂ ಎದ್ದು ಕಾಣುತ್ತಿತ್ತು.
ಈ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಶಾಸಕ ಸಿದ್ದು ಸವದಿ, ಸ್ಥಳೀಯ ಮುಖಂಡರು, ಮಹಿಳೆಯರು, ಮಕ್ಕಳು, ವೃದ್ಧರು ಸಾರ್ವಜನಿಕರು, ಗ್ರಾಮ ಪಂಚಾಯಿತಿ ಪಿಡಿಓ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Related