ಕೆ.ಸಿ ರೆಡ್ಡಿ ರವರ ಪ್ರತಿಮೆಗೆ ಮಾಲಾರ್ಪಣೆ: ಮುಖ್ಯಮಂತ್ರಿಗಳು

ಬೆಂಗಳೂರು, ಮೇ 03 : ಮಾಜಿ ಮುಖ್ಯಮಂತ್ರಿ ಕೆ.ಸಿ..ರೆಡ್ಡಿ ಅವರ  120 ನೇ ಜನ್ಮದಿನಾಚಾರಣೆಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸೌಧದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ  ಮಾತನಾಡಿದರು. 

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಕೆ ಸಿ ರೆಡ್ಡಿ ಅವರ 12೦ನೇ ಜನ್ಮದಿನದ ಅಂಗವಾಗಿ ಇಂದು ವಿಧಾನ ಸೌಧದ ಆವರಣದಲ್ಲಿ ಇರುವ ಕೆ ಸಿ ರೆಡ್ಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇಂದು ಇಟಲಿ ದೇಶದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾದ ಲುಯ್ಗಿ ಡಿ ಮಾಯಿಒ ( LUIGI DI MAIO) ನೇತೃತ್ವದ ನಿಯೋಗದ ಜತೆ ಇಂದು ಬೆಂಗಳೂರಿನಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕೆ ಸಿ ರೆಡ್ಡಿ ಅವರ ಸಂಬಂಧಿ ಕವಿತಾ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related