ರೈತ ಸಮುದಾಯಕ್ಕೆ ಬಿಗ್ ಶಾಕ್

ರೈತ ಸಮುದಾಯಕ್ಕೆ ಬಿಗ್ ಶಾಕ್

ರಾಯಚೂರು : ರಾಜ್ಯದ ರೈತ ಸಮುದಾಯಕ್ಕೆ ಬಿಗ್ ಶಾಕ್ ವೊಂದು ಎದುರಾಗಿದ್ದು, ಪೆಟ್ರೋಲ್, ಡೀಸೆಲ್ ಏರಿಕೆ ಪರಿಣಾಮ ರಸಗೊಬ್ಬರಗಳ ಬೆಲೆ ಕೂಡ ಏರಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ರಾಜ್ಯದ ಪ್ರಮುಖ ರಸಗೊಬ್ಬರ ಉತ್ಪಾದನಾ ಕಂಪನಿಗಳು ಅಂತಾರಾಷ್ಟ್ರೀಯ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನೆಪವಾಗಿಟ್ಟುಕೊಂಡು ರಸಗೊಬ್ಬರಗಳ ಬೆಲೆ ಏರಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಈ ಮೂಲಕ ರೈತರಿಗೆ ಬಿಗ್ ಶಾಕ್ ಎದುರಾಗಿದೆ.

ರಸಗೊಬ್ಬರ ಕಂಪನಿಗಳು ಡಿಎಪಿ 1.300 ರಿಂದ 1500 ರೂ. ಎನ್ ಪಿಕೆ 1.180 ರಿಂದ 1. 400 ರೂ. ಎನ್ ಪಿಎಸ್ 960 ರೂ. ನಿಂದ 1.150 ರೂ. ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ 50 ಕೆಜಿ ಡಿಎಪಿ ಮತ್ತು ಪೊಟ್ಯಾಷ್ ರಸಗೊಬ್ಬರಕ್ ಎಕ 200 ರಿಂದ 300 ರೂ. ಹೆಚ್ಚಳಕ್ಕೆ ಮುಂದಾಗಿವೆ ಎಂದು ಹೇಳಲಾಗುತ್ತಿದೆ.

Related