ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಜಾಗೃತಿ ಅಭಿಯಾನ..

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಜಾಗೃತಿ ಅಭಿಯಾನ..

“ವಿಶ್ವ ತಂಬಾಕು ನಿಷೇಧ ದಿನ’ದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ತಂಬಾಕು ಹಾಗೂ ಧೂಮಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಿಸುತ್ತಿರುವ ಜಾಗೃತಿ ಅಭಿಯಾನಕ್ಕೆ ಪಾಲಿಕೆ ಕೇಂದ್ರ ಕಛೇರಿ ಆವರಣ ಅನೆಕ್ಸ್ ಕಟ್ಟಡ-೦೩ ಮುಂಭಾಗ ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕ್ ಚಂದ್ರ ರವರು ಚಾಲನೆ ನೀಡಿದರು.

ಬಿಬಿಎಂಪಿ ಯಿಂದ ತಂಬಾಕು ಸೇವನೆಯಿಂದಾಗುವ ಮಾನವ, ಪರಿಸರ ಮತ್ತು ಪರೋಕ್ಷ ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಜಾಗೃತಿ ಅಭಿಯಾನವನ್ನು ಆರಂಭಿಸಿದೆ. “ತಂಬಾಕು: ನಮ್ಮ ಪರಿಸರಕ್ಕೆ ಮಾರಕ” ಎಂಬ ವಿಷಯದೊಂದಿಗೆ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಿ, ತಂಬಾಕು ಸೇವನೆಯಿಂದ ಪರೋಕ್ಷ ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಅಭಿಯಾನದ ಅಂಗವಾಗಿ ರೇಡಿಯೊದಲ್ಲಿ ಜಾಗೃತಿ ಮೂಡಿಸಲು ರೇಡಿಯೋ ಟಾಕ್ ಶೋ ಮತ್ತು ಕಿರುನಾಟಕ ಪ್ರಸರಣ ಜೊತೆಗೆ ಮೀಸಲಾದ ಸಂದೇಶವನ್ನು ಆಟೋ ಪ್ರಚಾರದ ಅಭಿಯಾನವನ್ನು ಯೋಜಿಸಲಾಗಿದೆ.

ಪ್ರಚಾರವು 3 ವಾರಗಳ ಕಾಲ ನಗರದಾದ್ಯಂತ ಮೀಸಲಾದ ಸಂದೇಶವನ್ನು ಪ್ರಸರಣ ಮಾಡುವುದನ್ನು ಒಳಗೊಂಡಿರುತ್ತದೆ.
ತಂಬಾಕು ಹಾನಿಗಳ ಮೇಲೆ ಕೇಂದ್ರೀಕರಿಸಿದ ಈ ಕಾರ್ಯಕ್ರಮಗಳನ್ನು ವೈಟಲ್ ಸ್ಟ್ರಾಟಜೀಸ್ ನ “ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಅಲ್ಲದೆ, ಸಮಾಲೋಚಕರೊಂದಿಗೆ 10 ಆಟೋಗಳ ಮೂಲಕ ಸಾರ್ವಜನಿಕ ಪ್ರದೇಶ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಜಾಗೃತಿ ಮೂಡಿಸುತ್ತವೆ ಮತ್ತು ಆಯ್ದ ಪ್ರದೇಶಗಳಲ್ಲಿ 2 ವಾರಗಳವರೆಗೆ ಡಿ-ಅಡಿಕ್ಷನ್ ಸೇವೆಗಳನ್ನು ಒದಗಿಸುತ್ತವೆ.

Related