ಬಾಹುಬಲಿ ಅವತಾರದಲ್ಲಿ ಮಿಂಚಿದ ಟ್ರಂಪ್

ಬಾಹುಬಲಿ ಅವತಾರದಲ್ಲಿ ಮಿಂಚಿದ ಟ್ರಂಪ್

ವಾಷಿಂಗ್ಟನ್, ಫೆ. 23 : ಅಮೆರಿಕ ಮತ್ತು ಭಾರತದಲ್ಲಿ ತೀವ್ರ ಟೀಕೆ-ಟಿಪ್ಪಣಿಗಳ ನಡುವೆಯೂ ಭಾರೀ ಸಂಚಲನ ಸೃಷ್ಟಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆ ಅನೇಕ ವಿದ್ಯಮಾನಗಳು ಕಂಡುಬರುತ್ತವೆ.ಭಾರತದ ಮಹೋನ್ನತ ಚಿತ್ರಕಲಾಕೃತಿ ಬಾಹುಬಲಿ ಸಿನಿಮಾದ ನಾಯಕ ಪ್ರಭಾಸ್ ಅವರ ವೀರಾವೇಶ ಹೋರಾಟದ ಸನ್ನಿವೇಶವನ್ನು ಟ್ರಂಪ್ ರೂಪದಲ್ಲಿ ಬಿಂಬಿಸಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅಪಾರ ಸಂಖ್ಯೆಯ ಮಂದಿ ವೀಕ್ಷಿಸಿ ಥ್ರಿಲ್ ಆಗಿದ್ದಾರೆ. ಅಮೆರಿಕ ಪ್ರಥಮ ಮಹಿಳೆ ಮತ್ತು ಡೊನಾಲ್ಡ್ ಅವರ ಪತ್ನಿ ಮಲೇನಿಯಾ ಟ್ರಂಪ್, ಪುತ್ರಿ ಇವಾಂಕ ಟ್ರಂಪ್ ಮತ್ತು ಟ್ರಂಪ್ ಜೂನಿಯರ್(ಪುತ್ರ) ಅವರನ್ನೂ ಸಹ ಬಿಂಬಿಸಲಾಗಿದೆ.

Related