ಮತ್ತೊಂದು ಸಿಡಿ ಪ್ರಕರಣ ಬಹಿರಂಗ

ಮತ್ತೊಂದು ಸಿಡಿ ಪ್ರಕರಣ ಬಹಿರಂಗ

ಕಲಬುರಗಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಯಲಿಗೆ ಬಂದ ಬೆನ್ನಲ್ಲೇ ಇದೀಗ ಅಂತಹುದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಮಹಿಳಾ ಸಿಬ್ಬಂದಿಗೆ ಕೆಲಸ ಖಾಯಂಗೊಳಿಸುವುದಾಗಿ ಹೇಳಿ ವಿಶ್ವವಿದ್ಯಾಲಯದ ಗ್ರಂಥಾಲಯದ ಅಧೀಕ್ಷಕನೊಬ್ಬ ಮಹಿಳೆಯ ಬೆತ್ತಲೆ ವಿಡಿಯೋ ಪಡೆದು ವಂಚಿಸಿರುವ ಘಟನೆ ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ವಿಶ್ವವಿದ್ಯಾಲಯದ ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ವಿರುದ್ಧ ಇದೀಗ ಮಹಿಳಾ ಸಿಬ್ಬಂದಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಶರಣಪ್ಪ, ಮಹಿಳೆಗೆ ಕೆಲಸ ಖಾಯಂಗೊಳಿಸುವುದಾಗಿ ಭರವಸೆ ನೀಡಿ ಆಕೆಯ ಬೆತ್ತಲೆ ವಿಡಿಯೋ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದ. ಕೆಲಸದ ಆಮಿಷಕ್ಕೆ ನಂಬಿ ಮಹಿಳೆ ತನ್ನ ಬೆತ್ತಲೆ ವಿಡಿಯೋಗಳನ್ನು ಆತನಿಗೆ ಕಳುಹಿಸಿದ್ದಳಂತೆ. ಆದರೆ ಮಹಿಳೆಯಿಂದ ವಿಡಿಯೋ ಪಡೆದ ಶರಣಪ್ಪ ಆ ವಿಡಿಯೋಗಳನ್ನು ವಾಟ್ಸಪ್‌ನಲ್ಲಿ ಬೇರೆ ಗ್ರೂಪ್‌ಗಳಿಗೆ ಶೇರ್ ಮಾಡಿದ್ದಾನೆ.

ಗ್ರಂಥಲಾಯದ ಅಧಿಕ್ಷಕನಿಂದ ಮೋಸ ಹೋಗಿದ್ದು ತಿಳಿದ ಮಹಿಳೆ, ವಿವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆರೋಪಿ ಶರಣಪ್ಪ ವಿರುದ್ಧ ಸೆಕ್ಷನ್ 292, 407, 420, 354ಚಿ ಅಡಿ ಪ್ರಕರಣ ದಾಖಲಾಗಿದೆ.

Related