ಚೀನಾಗೆ ಅಮೇರಿಕಾದಿಂದ ಮರ್ಮಾಘಾತ

ಚೀನಾಗೆ ಅಮೇರಿಕಾದಿಂದ ಮರ್ಮಾಘಾತ

ವಾಷಿಂಗ್ ಟನ್: ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಕ್ಕು ಸ್ಥಾಪನೆ ಹಾಗೂ ಮಿಲಿಟರೀಕರಣದಲ್ಲಿ ತೊಡಗಿಸಿಕೊಂಡಿದ್ದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಅಧಿಕಾರಿಗಳಿಗೆ ಅಮೇರಿಕ ವೀಸಾ ನಿರ್ಬಂಧ ವಿಧಿಸಿದೆ.

ಅಮೇರಿಕದ ಗೃಹ ಕಾರ್ಯದರ್ಶಿ ಮೈಕ್ ಪೊಂಪಿಯೋ ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ, ಮಿಲಿಟರೀಕರಣದಲ್ಲಿ ತೊಡಗಿಕೊಂಡಿರುವ, ತೊಡಕಾಗಿರುವ, ಅಥವಾ ಸಮುದ್ರದ ಮೇಲೆ ಹಕ್ಕು ಪ್ರತಿಪಾದನೆ ಮಾಡುತ್ತಿರುವ ಆಗ್ನೇಯ ಏಷ್ಯಾದವರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಪಿಆರ್ ಸಿ ಹಾಗೂ ಪಿಎಲ್ಎ ಸಿಬ್ಬಂದಿಗಳು, ಖಾಸಗಿ ವ್ಯಕ್ತಿಗಳಿಗೆ ಅಮೇರಿಕ ವೀಸಾವನ್ನು ನಿರ್ಬಂಧಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.

ಈ ಕ್ರಮದಿಂದಾಗಿ ವೀಸಾ ನಿರ್ಬಂಧಕ್ಕೊಳಗಾದ ವ್ಯಕ್ತಿಗಳಿಗೆ ಅಮೇರಿಕ ಪ್ರವೇಶಿಸುವುದಕ್ಕೆ ಸಾಧ್ಯವಿರುವುದಿಲ್ಲ. ನಿರ್ಬಂಧಕ್ಕೊಳಗಾದ ವ್ಯಕ್ತಿಗಳ ಕುಟುಂಬ ಸದಸ್ಯರ ವೀಸಾಗಳು ಸಹ ವೀಸಾ ನಿರ್ಬಂಧಗಳಿಗೆ ಒಳಪಡಬೇಕಾಗುತ್ತದೆ ಎಂದು ಸ್ಟೇಟ್ ಡಿಪರ‍್ಟ್ಮೆಂಟ್ ತಿಳಿಸಿದೆ.

Related