ಬೆಂಗಳೂರಿಗೆ ಹೆಚ್ಚುವರಿ ಎಲೆಕ್ಟ್ರಿಕ್ ಬಸ್ ಗಳ ಪೂರೈಕೆಗೆ: ತೇಜಸ್ವೀ ಸೂರ್ಯ

ಬೆಂಗಳೂರಿಗೆ ಹೆಚ್ಚುವರಿ ಎಲೆಕ್ಟ್ರಿಕ್ ಬಸ್ ಗಳ ಪೂರೈಕೆಗೆ: ತೇಜಸ್ವೀ ಸೂರ್ಯ

ಬೆಂಗಳೂರು: ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಉತ್ತೇಜನಕ್ಕೆ ಯೋಜನೆ ಅಡಿಯಲ್ಲಿ, ಹೆಚ್ಚುವರಿ ಎಲೆಕ್ಟ್ರಿಕ್ ಬಸ್ ಗಳ ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಮಾನ್ಯ ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರು, ಸಿಲ್ಕ್ ಬೋರ್ಡ್ ನಿಂದ ಮಾರತ್ ಹಳ್ಳಿ ವರೆಗೆ ಬಿಎಂಟಿಸಿ ಅಧಿಕಾರಿಗಳೊಂದಿಗೆ  ಪರಿಶೀಲನೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆದುಕೊಂಡರು.

ʼಫೇಮ್ʼ ಯೋಜನೆ ಅಡಿಯಲ್ಲಿ ಬೆಂಗಳೂರು ನಗರಕ್ಕೆ 921( ಟಾಟಾ ಕಂಪನಿ), 300 (ಸ್ವಿಚ್ ಮೊಬಿಲಿಟಿ ಕಂಪನಿ) ಇಲೆಕ್ಟ್ರಿಕ್ -ಬಸ್ ಗಳನ್ನು ಪೂರೈಸಲಾಗುತ್ತಿದ್ದು, ಇದರಲ್ಲಿ 80 ಸ್ವಿಚ್ ಬಸ್ ಗಳು ಈಗಾಗಲೇ ನಗರದಲ್ಲಿ ಕಾರ್ಯಾಚರಣೆಗೆ ಇಳಿದಿವೆ. ಇದರೊಂದಿಗೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ JBM Auto ವತಿಯಿಂದ 90 ಇ – ಬಸ್ ಗಳು ಕೂಡ ನಗರದ ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿವೆ.

ಬಿಎಂಟಿಸಿ ಅಧಿಕಾರಿಗಳೊಂದಿಗೆ ಎಲೆಕ್ಟ್ರಿಕ್ ಬಸ್ ಗಳ ಪರಿಶೀಲನೆ ನಡೆಸಿ ಮಾತನಾಡಿದ ಸಂಸದ ತೇಜಸ್ವೀ ಸೂರ್ಯ ರವರು, ” ನಗರದ ವಾಹನ ದಟ್ಟಣೆ ತಗ್ಗಿಸಲು ಸಾರ್ವಜನಿಕ ಸಾರಿಗೆ ಅತ್ಯಂತ ಸುಗಮ , ಸರಳ ಮಾರ್ಗವಾಗಿದ್ದು, ಸೀಟ್ ಗಳ ಲಭ್ಯತೆ ಹಾಗೂ ಸೂಕ್ತ ಸಮಯ ಪರಿಪಾಲನೆಯ ಗ್ಯಾರಂಟಿ ದೊರೆತರೆ ಇನ್ನೂ ಹೆಚ್ಚಿನ, ಪರಿಣಾಮಕಾರಿ ಪ್ರಭಾವ ಬೀರಬಲ್ಲದು, 1.2 ಕೋಟಿ ಜನಸಂಖ್ಯೆಗೆ ಬಿಎಂಟಿಸಿ ಯು ಪ್ರಸ್ತುತ 6,500 ಬಸ್ ಗಳನ್ನು ಮಾತ್ರ ಹೊಂದಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ನಗರದ ಜನಸಂಖ್ಯೆಗೆ ತಕ್ಕಂತೆ ಪೂರೈಸಲು ಸರ್ಕಾರದ ವತಿಯಿಂದ  ಕ್ರಮ ಕೈಗೊಳ್ಳಲಾಗುವುದು ” ಎಂದು ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಫೇಮ್ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ ಗಳ ಪೂರೈಕೆ ಬಳಕೆಗೆ ವ್ಯಾಪಕ ಉತ್ತೇಜನ ನೀಡುತ್ತಿದ್ದು, ಕೇವಲ 12 ತಿಂಗಳ ಅವಧಿಯಲ್ಲಿ 170ಕ್ಕೂ  ಅಧಿಕ ಎಲೆಕ್ಟ್ರಿಕ್ ಬಸ್ ಗಳು ಈಗಾಗಲೇ ಕಾರ್ಯಾಚರಣೆಯಲ್ಲಿವೆ. ಫೇಮ್ -2 ಅನ್ವಯ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 921 ಟಾಟಾ,300 ಸ್ವಿಚ್ ಮೊಬಿಲಿಟಿ ಇ – ಬಸ್ ಗಳು ಮಂಜೂರಾಗಿದ್ದು, ಬಿಎಂಟಿಸಿ ವಾಹನಗಳ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಸಾರ್ವಜನಿಕ ಬಸ್‌ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ ಕೂಡ ಆಗಲಿದೆ ” ಎಂದು ಸಂಸದರು ವಿವರಿಸಿದರು.

ಕೇಂದ್ರ ಸರ್ಕಾರವು ಫೇಮ್ -2 ಅಡಿಯಲ್ಲಿ, 921 ಟಾಟಾ ಕಂಪೆನಿಯ ಎಲೆಕ್ಟ್ರಿಕ್ ಬಸ್ ಗಳಿಗೆ 39 ಲಕ್ಷ ರೂ, ಗಳ ಸಬ್ಸಿಡಿ ಒದಗಿಸಿದ್ದು, ಇದರ ಮೊತ್ತ 360 ಕೋಟಿ ರೂ, ಗಳಷ್ಟು ಆಗಿದ್ದು, ಉಳಿದ 1,250 ಕೋಟಿ ರೂ,ಗಳನ್ನ ಬಿಎಂಟಿಸಿ ಭರಿಸಲಿದೆ . ಇದೇ ಯೋಜನೆ ಅಡಿಯಲ್ಲಿ ಸ್ವಿಚ್ ಮೊಬಿಲಿಟಿ ಕಂಪನಿ ವತಿಯಿಂದ ಪೂರೈಸಲಾಗಿರುವ 300 ಎಲೆಕ್ಟ್ರಿಕ್ ಬಸ್ ಗಳಿಗೆ ಕೇಂದ್ರ ಸರ್ಕಾರವು ಪ್ರತಿಯೊಂದು ಬಸ್ ಗೂ 35 ರಿಂದ 55 ಲಕ್ಷದವರೆಗೆ ಸಬ್ಸಿಡಿ ಒದಗಿಸಿದ್ದು, ಇದರ ಮೊತ್ತ 130 ಕೋಟಿ. ಉಳಿದ 390 ಕೋಟಿ ರೂಗಳನ್ನು ಬಿಎಂಟಿಸಿ ಭರಿಸಲಿದೆ.

JBM Auto ವತಿಯಿಂದ ಪೂರೈಸುವ ಬಸ್ 120 ಕಿಮೀ/ ದಿನ, ಸ್ವಿಚ್ ಮೊಬಿಲಿಟಿ ಇ- ಬಸ್ 225ಕಿಮೀ/ ದಿನ ಚಲಿಸಲಿದ್ದು, ಹೆಚ್ಚಿನ ಪ್ರಮಾಣದಲ್ಲಿರುವ ಟಾಟಾ ಎಲೆಕ್ಟ್ರಿಕ್ ಬಸ್ ಗಳು ವಾರ್ಷಿಕ 70 ಸಾವಿರ ಕಿಮೀ ಚಲಿಸುವ ಸಾಮರ್ಥ್ಯ ಹೊಂದಿವೆ.

ಇದೇ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಕೂಡ ಸಂವಾದ ನಡೆಸಿದ ಸಂಸದರು, ನಗರದ ಬಸ್ ಸಂಚಾರ ವ್ಯವಸ್ಥೆ  ಅಭಿವೃದ್ಧಿಗೆ, ಕೊನೆ ಹಂತದ ಸಂಚಾರಕ್ಕೆ ಅನುಕೂಲವಾಗುವ ಕ್ರಮಗಳ ಕುರಿತು ಪ್ರಯಾಣಿಕರ ಅಭಿಪ್ರಾಯ ಪಡೆದಿದ್ದು ಕೂಡ ವಿಶೇಷ.

ಉನ್ನತ ತಂತ್ರಜ್ಞಾನ ಬಳಕೆಯೊಂದಿಗೆ, ರಿಯಲ್ ಟೈಮ್ ಪ್ಯಾಸೆಂಜರ್ ಇನ್ಫಾರ್ಮೇಷನ್, ತುರ್ತು ಸಂದರ್ಭದಲ್ಲಿ ಉಪಯೋಗವಾಗುವ ಪ್ಯಾನಿಕ್ ಬಟನ್ ಗಳ ಅಳವಡಿಕೆಯ ಮುಖಾಂತರ ಸರ್ಕಾರವು ಸಾರ್ವಜನಿಕ ಸಾರಿಗೆಯನ್ನು, ಜನಸ್ನೇಹಿಯಾಗಿಸುತ್ತಿರುವುದು ಅಭಿನಂದನಾರ್ಹ ” ಎಂದು ಸಂಸದರು ವಿವರಿಸಿದರು.

 

 

Related