ಬರಿದಾದ ಟಿವಿ ಸ್ಟೇಷನ್ ಕೆರೆ

  • In State
  • August 11, 2023
  • 170 Views
ಬರಿದಾದ ಟಿವಿ ಸ್ಟೇಷನ್ ಕೆರೆ

ದಾವಣಗೆರೆ: ರಾಜ್ಯದಲ್ಲಿ ಈಗಾಗಲೇ ಮಳೆ ಕೊರತೆ ಎದುರಿಸುತ್ತಿರುವ ಜನರಿಗೆ ಎಲ್ಲಿಲ್ಲದ ಸಂಕಷ್ಟ ಎದುರಾಗಿದೆ. ರೈತರು ಮಳೆ ಬರದಿದ್ದ ಕಾರಣ ಆಕಾಶದತ್ತ ಮುಖ ಮಾಡಿ ಮಳೆರಾಯ ಯಾವಾಗ ಬರುತ್ತಾನೋ ಎಂದು ದಾರಿ ಕಾಯುತ್ತಿದ್ದಾರೆ.

ಹೌದು, ವಾಡಿಕೆಯಂತೆ ಮಳೆ ಬಾರದೇ, ನೀರಿನ ಕೊರತೆ ಎದುರಾಗುವ ಸ್ಥಿತಿ ಉಂಟಾಗಿದೆ. ದಾವಣಗೆರೆ ನಗರಕ್ಕೆ ನೀರು ಒದಗಿಸುವ ಜಲಮೂಲಗಳಲ್ಲಿ ಒಂದಾದ ಟಿವಿ ಸ್ಟೇಷನ್ ಕೆರೆ ಒಡಲು ಬರಿದಾಗುತ್ತಿದೆ. ಇನ್ನು ಎರಡ್ಮೂರು ದಿನ ಒದಗಿಸುವಷ್ಟು ಮಾತ್ರ ಕೆರೆಯಲ್ಲಿ ನೀರಿದೆ. ಭದ್ರಾ ಕಾಲುವೆಯಿಂದ ಹರಿಸಿರುವ ನೀರು ನಗರಕ್ಕೆ ತಲುಪುವವರೆಗೂ ಕೆಲವು ವಾರ್ಡ್ಗಳಲ್ಲಿ ನೀರಿಗೆ ಸಮಸ್ಯೆ ಆಗಬಹುದು.

ಮುಂದಿನ ದಿನಗಳಲ್ಲಿ ಇನ್ನು ಮಳೆ ಸುರಿದು ಭದ್ರಾ ನದಿ ತುಂಬಿದರೆ ಜನರಿಗೆ ಸಮಸ್ಯೆ ಅಗುವುದಿಲ್ಲ, ಇನ್ನು ಬೇಸಿಗೆ ಬತ್ತದ ಬೆಳೆಗೂ ನೀರು ಒದಗಿಸಲಾಗುತ್ತದೆ. ಅದರೆ ಮಳೆ ಬಾರದೆ ಇದ್ದರೆ ಸಮಸ್ಯೆ ಆಗುತ್ತದೆ. ನಗರಕ್ಕೆ ನೀರು ಒದಗಿಸುವ ಜಲಮೂಲಗಳಲ್ಲಿ ಒಂದಾದ ಟಿವಿ ಸ್ಟೇಷನ್ ಕೆರೆಯ ಒಡಲು ಬರಿದಾಗುತ್ತಿದೆ. ಇನ್ನು ನಾಲ್ಕು ದಿನ ನೀರು ಒದಗಿಸುವಷ್ಟು ಮಾತ್ರ ಕೆರೆಯಲ್ಲಿ ನೀರಿದೆ. ಭದ್ರಾ ಕಾಲುವೆಯಿಂದ ಹರಿಸಿರುವ ನೀರು ನಗರ ಸರಿ ಸೂಮಾರು 14 ವಾರ್ಡ್ಗಳಿಗೆ ತಲುಪುವವರೆಗೂ ಕೆಲ ವಾರ್ಡ್ಗಳಲ್ಲಿ ನೀರಿಗೆ ಸಮಸ್ಯೆ ಆಗಬಹುದು.

ಸುಮಾರು 9 ಮೀಟರ್ ಆಳದ ಕೆರೆಯಲ್ಲಿಈಗ ಅಲ್ಲಲ್ಲಿ ತೆಗ್ಗು ಗುಂಡಿಗಳಲ್ಲಿ ಮಾತ್ರ ನೀರು ನಿಂತಿದೆ. ಆ ನೀರನ್ನೇ ನಾಲ್ಕು ದಿನ ಪಂಪ್ ಮಾಡಬಹುದಾಗಿದ್ದು ಆ ನಂತರದ ದಿನಗಳಲ್ಲಿ ನೀರಿಗೆ ಸಮಸ್ಯೆ ಆದರೂ ಆಗಬಹುದು ಎಂದು ಮಹಾನಗರ ಪಾಲಿಕೆ ಅಭಿಯಂತರರು ಹೇಳುತ್ತಿದ್ದಾರೆ.

ವರದಿಗಾರ

ಎ.ಚಿದಾನಂದ

Related