5 ಗ್ಯಾರಂಟಿ ಯೋಜನೆ ಖಚಿತ: ಡಿಸಿಎಂ ಡಿಕೆ.ಶಿ

5 ಗ್ಯಾರಂಟಿ ಯೋಜನೆ ಖಚಿತ: ಡಿಸಿಎಂ ಡಿಕೆ.ಶಿ

ಬೆಂಗಳೂರು: ನಾವು ನುಡಿದಂತೆ ನಡೆಯುವವರು ಯಾರೇ ಏನೇ ಹೇಳಿದರೂ ಏನೇ ಮಾತಾಡಿದರೂ ಜನರು ಯಾರ ಮಾತಿಗೂ ಕಿವಿ ಕೊಡಬೇಡಿ. ನಾವು ನೀಡಿರುವಂತಹ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು 5 ಗ್ಯಾರಂಟಿಗಳ ಬಗ್ಗೆ ಭರವಸೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿನಿತ್ಯ ಚರ್ಚೆಯಾಗುತ್ತಿದ್ದು, ಈ ಸಂಬಂಧ ಗಾಬರಿಯಾಗುವುದು ಬೇಡ. ಊಹಾಪೋಹಗಳಿಗೆ ಜನತೆ ಕಿವಿಗೊಡಬಾರದು ಎಂದು ಹೇಳಿದ್ದಾರೆ.

ಯಾರು ಗಾಬರಿ ಆಗೋದು ಬೇಡ, ಊಹಾಪೋಹಗಳಿಗೆ ಕಿವಿಗೊಡೋದು ಬೇಡ. ನಾವು ಹೇಳಿದ್ದನ್ನೇ ಮಾಡುತ್ತೇವೆಂದು ಭರವಸೆ ನೀಡಿದರು.

ಯಾರು ಬೇಕಾದರೂ ಚರ್ಚೆ ಮಾಡಲಿ. ಬೈಯೋರು ಬೈಯಲಿ. ಎಲ್ಲರಿಗೂ ಮಾತಾಡೋಕೆ ವಾಕ್ ಸ್ವಾತಂತ್ರ್ಯ ಇದೆ ಎಂದು ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯನ್ನು ಕಾಂಗ್ರೆಸ್‍ನವರು 5 ಗ್ಯಾರಂಟಿಗಳನ್ನು ಘೋಷಿಸಿದ್ದರು. ಆದರೆ, ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಯಾವುದೇ ಗ್ಯಾಂಟಿಗಳನ್ನು ಜಾರಿಗೆ ತಂದಿಲ್ಲ.

 

Related