ಬೆಂಗಳೂರು, ಆ 17: ಮಹಿಳಾ ಕಾನ್ಸ್ಟೇಬಲ್ಗೆ ರೌಡಿಶೀಟರ್ ಓರ್ವ ಚಾಕು ಇರಿದಿರುವ ಘಟನೆ ನಗರ ಹೆಎಎಲ್ ಠಾಣಾ ವ್ಯಾಪ್ತಿಯ ಜ್ಯೋತಿ ನಗರದಲ್ಲಿ ಘಟನೆ ನಡೆದಿದೆ.
ವಿನುತಾ ಚಾಕು ಇರಿತಕ್ಕೊಳಗಾದ ಹೆಡ್ ಕಾನ್ಸ್ಟೇಬಲ್ ಎಂದು ಗುರುತಿಸಲಾಗಿದ್ದು, ರೌಡಿಶೀಟರ್ ಶೇಖ್ ಷರೀಫ್ ಈ ಕೃತ್ಯವನ್ನು ಎಸಗಿದ್ದಾನೆ. ಆಗಸ್ಟ್ 5 ರಂದು ಆರೋಪಿಯನ್ನು ಬಂಧಿಸಲು ವಿನುತಾ ಹೋಗಿದ್ದರು. ಈ ವೇಳೆ ಕಾನ್ಸ್ಟೇಬಲ್ಗೆ ಆರೋಪಿ ಚಾಕು ಇರಿದಿದ್ದಾನೆ.
ಇತ್ತೀಚೆಗಷ್ಟೇ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಅಲ್ಲದೇ ಮತ್ತೆ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಆತನನ್ನು ಠಾಣೆಗೆ ಕರೆತರಲು ಆಗಸ್ಟ್ 5 ರಂದು ಮಹಿಳಾ ಹೆಡ್ಕಾನ್ಸ್ಟೇಬಲ್ ವಿನುತಾ ಹಾಗೂ ತಂಡ ಹೋಗಿತ್ತು.