ಮಹಿಳಾ ಹೆಡ್ ಕಾನ್ಸ್​ಟೇಬಲ್​ಗೆ ಚೂರಿ ಇರಿದ ರೌಡಿ ಶೀಟರ್…!

  • In Crime
  • August 17, 2022
  • 258 Views
ಮಹಿಳಾ ಹೆಡ್ ಕಾನ್ಸ್​ಟೇಬಲ್​ಗೆ ಚೂರಿ ಇರಿದ ರೌಡಿ ಶೀಟರ್…!

ಬೆಂಗಳೂರು, ಆ 17: ಮಹಿಳಾ ಕಾನ್ಸ್​ಟೇಬಲ್​ಗೆ ರೌಡಿಶೀಟರ್ ಓರ್ವ ಚಾಕು ಇರಿದಿರುವ ಘಟನೆ ನಗರ ಹೆಎಎಲ್ ಠಾಣಾ ವ್ಯಾಪ್ತಿಯ ಜ್ಯೋತಿ ನಗರದಲ್ಲಿ ಘಟನೆ ನಡೆದಿದೆ.

ವಿನುತಾ ಚಾಕು ಇರಿತಕ್ಕೊಳಗಾದ ಹೆಡ್ ಕಾನ್ಸ್​ಟೇಬಲ್​ ಎಂದು ಗುರುತಿಸಲಾಗಿದ್ದು, ರೌಡಿಶೀಟರ್ ಶೇಖ್ ಷರೀಫ್ ಈ ಕೃತ್ಯವನ್ನು ಎಸಗಿದ್ದಾನೆ. ಆಗಸ್ಟ್ 5 ರಂದು ಆರೋಪಿಯನ್ನು ಬಂಧಿಸಲು ವಿನುತಾ ಹೋಗಿದ್ದರು. ಈ ವೇಳೆ ಕಾನ್ಸ್​ಟೇಬಲ್ಗೆ ಆರೋಪಿ ಚಾಕು ಇರಿದಿದ್ದಾನೆ.

ಇತ್ತೀಚೆಗಷ್ಟೇ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಅಲ್ಲದೇ ಮತ್ತೆ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಆತನನ್ನು ಠಾಣೆಗೆ ಕರೆತರಲು ಆಗಸ್ಟ್ 5 ರಂದು ಮಹಿಳಾ ಹೆಡ್ಕಾನ್ಸ್​ಟೇಬಲ್​ ವಿನುತಾ ಹಾಗೂ ತಂಡ ಹೋಗಿತ್ತು.

Related