ವರದಕ್ಷಿಣೆ ನೀಡದ್ದಕ್ಕೆ ಪತಿ, ಸಂಬಂದಿಕರಿಂದ ಅತ್ಯಾಚಾರ

  • In Crime
  • April 30, 2022
  • 242 Views
ವರದಕ್ಷಿಣೆ ನೀಡದ್ದಕ್ಕೆ ಪತಿ, ಸಂಬಂದಿಕರಿಂದ ಅತ್ಯಾಚಾರ

ಪತ್ನಿ ಕಡೆಯವರು ವರದಕ್ಷಿಣೆ ನೀಡಲಿಲ್ಲವೆಂದು ಸಿಟ್ಟಿಗೆದ್ದ ಪತಿ ಹಾಗೂ ಆತನ ಸಂಬಂದಿಕರು ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಇಷ್ಟೇ ಅಲ್ಲದೇ ಪಾಪಿಗಳು ಸಾಮೂಹಿಕ ಅತ್ಯಾಚಾರದ ದೃಶ್ಯವನ್ನು ಯೂಡ್ಯೂಬ್ ಗೆ ಅಪಲೋಡ್ ಮಾಡಿದ್ದಾರೆ. ರಾಜಸ್ತಾನ್ ಭರತ್ ಪುರದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ವರದಕ್ಷಿಣೆ ಸಿಗದಕ್ಕೆ ಕ್ರೋಧಗೊಂಡ ಪತಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲು ಪ್ರೇರಣೆ ನೀಡಿದ್ದಾನೆ.ಅಲ್ಲದೇ ವರದಕ್ಷಿಣೆಯಿಂದ ಸಿಗದ ಹಣವನ್ನು ಪತ್ನಿಯ ಅಶ್ಲೀಲ ವಿಡಿಯೋದಿಂದ ಪಡೆಯುವುದಾಗಿ ವರದಕ್ಷಿಣೆ ನೀಡುವಂತೆ ಬೇಡಿಕೆ ಇರಿಸಿದ್ದ ಎಂದು ತಿಳಿದು ಬಂದಿದೆ.

ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡುವ ಮೂಲಕ ವರದಕ್ಷಿಣೆ  ಹಣವನ್ನು ಪಡೆಯುವುದಾಗಿ ಪತಿ ತನ್ನ ಹೆಂಡತಿಗೆ ಹೇಳಿದ್ದಾನೆ. ಸಂತ್ರಸ್ತೆಯ ಪತಿ ಮತ್ತು ಆತನ ಸಂಬಂಧಿಕರಿಬ್ಬರ ವಿರುದ್ಧ ಈಗ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.ಭರತ್ ಪುರದ ಕಮಾನ್ ಪೊಲೀಸ್ ಸ್ಪೇಷನ್ ಹೌಸ್ ಆಫೀಸರ್  ದೌಲತ್ ಸಾಹು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಹಿಳೆಯೊಬ್ಬಳು ತನ್ನ ಪತಿ ಮತ್ತು ಇಬ್ಬರು ಸಂಬಂಧಿಕರ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾರೆ.

 

Related