೯ ವರ್ಷಗಳ ನಂತರ ಒಂದಾದ ಧ್ರುವ ಸರ್ಜಾ ಮತ್ತು ಎ.ಪಿ ಅರ್ಜುನ್

  • In Cinema
  • August 4, 2021
  • 1036 Views
೯ ವರ್ಷಗಳ ನಂತರ ಒಂದಾದ ಧ್ರುವ ಸರ್ಜಾ ಮತ್ತು ಎ.ಪಿ ಅರ್ಜುನ್

ಅದ್ದೂರಿ, ಭರ್ಜರಿ, ಬಹದ್ದೂರ್, ಪೊಗರುಗಳಂತಹ ಹಿಟ್ ಚಿತ್ರಗಳನ್ನು ನೀಡಿರುವ ಧ್ರುವ ಸರ್ಜಾರವರ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ತೆರೆ ಬಿದಿದ್ದೆ . ಈಗಾಗಲೆ ಚಿತ್ರಕ್ಕೆ ಧ್ರುವ ಸರ್ಜಾ ಸಹಿ ಹಾಕಿದ್ದು , ಚಿತ್ರೀಕರಣ ಆಗಸ್ಟ್ ೧೫ ರಿಂದ ಶುರುವಾಗಲಿದೆ.
ಅದ್ದೂರಿ ಚಿತ್ರದಿಂದ ಸಖತ್ ಸದ್ದು ಮಾಡಿದ ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಜೋಡಿ ೯ ವರ್ಷಗಳ ನಂತರ ಮತ್ತೆ ಒಂದಾಗಿರುವುದು ಸಿನಿ ಪ್ರಿಯರಿಗೆ ಸಂತಸ ತಂದಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನು ಬೆಳ್ಳಿ ತೆರೆಗೆ ಪರಿಚಯಿಸಿದ ಎ.ಪಿ ಅರ್ಜುನ್ ತಮ್ಮ ಹೊಸ ಚಿತ್ರದಲ್ಲಿ ಸರ್ಜಾಗೆ ಯಾವ ಲುಕ್ ನೀಡಲಿದ್ದಾರೆ ನೊಡಬೇಕು. ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಲಿದ್ದು, ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರ ತಂಡ ಈಗಾಗಲೆ ಸ್ಕಿçಪ್ಟ್ ಪೂಜೆ ಮುಗಿಸಿದ್ದು, ಚಿತ್ರದಲ್ಲಿ ದೊಡ್ಡ ತಾರ ಬಳಗವೆ ಇರಲಿದೆ.

Related