ಮಮತಾ ಬ್ಯಾನರ್ಜಿ ಸಂಪುಟ ಸೇರಿದ 9 ಶಾಸಕರು

ಮಮತಾ ಬ್ಯಾನರ್ಜಿ ಸಂಪುಟ ಸೇರಿದ 9 ಶಾಸಕರು

ಕೊಲ್ಕತ್ತಾ, ಆ.03: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟ ಪುನಾರಚನೆಯಾಗಿದೆ. ಬುಧವಾರದಂದು 9 ಶಾಸಕರು ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಬಾಬುಲ್ ಸುಪ್ರಿಯೋ, ಪಾರ್ಥ ಭೌಮಿಕ್, ಸ್ನೇಹಸಿಸ್ ಚಕ್ರವರ್ತಿ ಮತ್ತು ಇತರರು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ಬುಧವಾರ (ಆ.3) ಸಂಪುಟ ಪುನಾರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಘೋಷಿಸಿದ್ದರು. ತನ್ನ ಸಂಪುಟದ ಸಚಿವ ಮತ್ತು ಆಪ್ತ ಪಾರ್ಥ ಚಟರ್ಜಿ ಮೇಲೆ ಇತ್ತೀಚೆಗೆ ನಡೆದ ಇಡಿ ದಾಳಿಗಳ ಬೆನ್ನಲ್ಲೇ ಸಂಪುಟ ಪುನಾರಚನೆ ನಡೆಯಲಿದೆ ಎಂದು ತಿಳಿಸಿದ್ದರು.

“ನಾವು ಸಚಿವರಾದ ಸುಬ್ರತಾ ಮುಖರ್ಜಿ, ಸಾಧನ್ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಪಾರ್ಥ ಚಟರ್ಜಿ ಅವರು ಜೈಲಿನಲ್ಲಿದ್ದಾರೆ. ಆದ್ದರಿಂದ ಅವರ ಎಲ್ಲಾ ಕೆಲಸಗಳನ್ನು ಮಾಡಬೇಕು. ನಾನು ಒಬ್ಬಂಟಿಯಾಗಿ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು.

 

Related