ಸುಂದರ ಮೊಗಕ್ಕೆ ಮೊಸರೆ ಮದ್ದು

ಸುಂದರ ಮೊಗಕ್ಕೆ ಮೊಸರೆ ಮದ್ದು

ರುತುಮಾನ ಬದಲಾದಂತೆ ನಮ್ಮ ದೇಹದ ಚರ್ಮ ಕೂಡ ಬದಲಾಗುತ್ತದೆ. ಕೆಲವರು ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಲು ವೈದ್ಯರನ್ನು ಸಂಪರ್ಕಿಸುತ್ತಾರೆ ಆದರೆ ಇನ್ನೂ ಕೆಲವರು ಮನೆಯಲ್ಲಿ ಸಿಗುವಂತಹ ಮನೆಮದ್ದುಗಳನ್ನು ಉಪಯೋಗಿಸಿಕೊಂಡು ತಮ್ಮ ಚರ್ಮದ ರಕ್ಷಣೆ ರಕ್ಷಣೆಯನ್ನು ಮಾಡಿಕೊಳ್ಳುತ್ತಾರೆ.

ಹೌದು ಮನೆಯಲ್ಲಿ ಸಿಗುವಂತಹ ಮೊಸರನ್ನು ನಾವು ಬಳಸಿ ನಮ್ಮ ಚರ್ಮದಾ ಅಂದವನ್ನು ಕಾಪಾಡಿಕೊಳ್ಳಬಹುದು.

ಮೊಸರು ಆರೋಗ್ಯಕ್ಕೆ ಮಾತ್ರವಲ್ಲದೆ ನಮ್ಮ ಚರ್ಮಕ್ಕೂ ಸಹ ರಕ್ಷಣೆಯನ್ನು ನೀಡುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಮೊಸರು ಇರುತ್ತದೆ. ಮೊಸರಿಯಲ್ಲಿರುವ ಅಂಶದಿಂದ ನಮ್ಮ ಆರೋಗ್ಯ ಮತ್ತು ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ತ್ವಚೆಯ ಕೋಶಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್, ವಿಟಮಿನ್ ಮತ್ತು ಮಿನರಲ್‍ಗಳು ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುವ ಅಂಶ ಅದರಲ್ಲಿದೆ.

* ಎರಡು ಚಮಚ ಮೊಸರಿಗೆ ಚಿಟಿಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಬಳಿಕ ಅದನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. 15 ನಿಮಿಷ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಈ ರೀತಿ ವಾರಕ್ಕೆ 2-3 ಬಾರಿ ಮಾಡಿದರೆ ಮುಖದಲ್ಲಿನ ಧೂಳು ಮತ್ತು ಕೊಳೆ ನಿವಾರಣೆಯಾಗುತ್ತದೆ.

 

* ಒಂದು ಚಮಚ ಮೊಸರನ್ನು ಮುಖಕ್ಕೆ ಹಚ್ಚಿ, ಮಸಾಜ್ ಮಾಡಿಕೊಳ್ಳಿ ಬಳಿಕ ಅರ್ಧ ಗಂಟೆ ನಂತರ ಮುಖವನ್ನು ತೊಳೆದರೆ ಕಪ್ಪುಕಲೆ ಮಾಯವಾಗಿ ಮುಖ ಸುಂದರವಾಗಿ ಕಾಣುತ್ತದೆ.

 

* ಎರಡು ಚಮಚ ಮೊಸರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ, ಮುಖಕ್ಕೆ ಹಚ್ಚಿ. ಬಳಿಕ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದರಿಂದ ಒಣಚರ್ಮ ನಿವಾರಣೆಯಾಗುತ್ತದೆ.

 

* ಮೊಸರು ಅರ್ಧ ಕಪ್, 3 ಚಮಚ ತುರಿದ ಸೌತೆಕಾಯಿಯನ್ನು ಡಾರ್ಕ್ ಸರ್ಕಲ್ ಹಾಗೂ ಟ್ಯಾನ್ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. 15 ನಿಮಿಷದ ನಂತರ ತಣ್ಣಗಿರುವ ನೀರಿನಿಂದ ತೊಳೆಯಬೇಕು. ಈ ರೀತಿ ವಾರಕ್ಕೆ 2 ಬಾರಿ ಮಾಡುವುದರಿಂದ ಟ್ಯಾನ್ ಮತ್ತು ಚರ್ಮದ ಕಪ್ಪು ಕಡಿಮೆಯಾಗುತ್ತದೆ.

 

* ಒಂದು ಚಮಚ ಕಡಲೆ ಹಿಟ್ಟಿಗೆ 2 ಚಮಚ ಮೊಸರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಬಳಿಕ ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಬೇಕು. ಇದು ಜಿಡ್ಡಿನ ಮತ್ತ ಸೂಕ್ಷ್ಮ ತ್ವಚೆಗೆ ಸೂಕ್ತವಾಗಿದೆ. ಜೊತೆಗೆ ತಾಜಾ ಕಾಂತಿಯನ್ನು ನೀಡುತ್ತದೆ.

 

* 2 ಚಮಚ ಮೊಸರಿಗೆ 1 ಚಮಚ ಅರಶಿಣವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ, ಬಳಿಕ ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

 

* ಬೇಯಿಸಿದ ಆಲೂಗಡ್ಡೆ, 2 ಚಮಚ ಮೊಸರು ಮತ್ತು ಸ್ವಲ್ಪ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿ, ನಿಮ್ಮ ಮುಖವನ್ನು ತೊಳೆದುಕೊಂಡ ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ನಂತರ 20 ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

 

Related