ಪಾಕಿಸ್ತಾನ ಘೋಷಣೆ ಕೂಗುವವರನ್ನು ಗುಂಡಿಟ್ಟು ಕೊಲ್ಲಬೇಕು: ಜಮೀರ್ ಅಹಮದ್

ಪಾಕಿಸ್ತಾನ ಘೋಷಣೆ ಕೂಗುವವರನ್ನು ಗುಂಡಿಟ್ಟು ಕೊಲ್ಲಬೇಕು: ಜಮೀರ್ ಅಹಮದ್

ಕೊಪ್ಪಳ: ಪಾಕಿಸ್ತಾನ ಘೋಷಣೆ ಕೂಗಿದವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ವಸತಿ ಸಚಿವ ಜಮೀರ್ ಅಹ್ಮದ್ ರವರು ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮತ ಪ್ರಚಾರದ ವೇಳೆ ಮಾತನಾಡಿದ ಅವರು, ಪಾಕಿಸ್ತಾನ ಘೋಷಣೆ ಕೂಗಿದವರನ್ನು ಗುಂಡಿಕ್ಕಿ ಟಿಶ್ಕ್ಯಾಂವ್ ಅಂತ ಸ್ಥಳದಲ್ಲೇ ಕೊಲ್ಲಬೇಕು ಎಂದು ಗಂಭೀರ ಹೇಳಿಕೆಯನ್ನು ನೀಡಿದ್ದಾರೆ.

ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲಬೇಕು. ಗುಂಡಿಕ್ಕಿಕೊಳ್ಳಲು ಕೋರ್ಟ್ ನಿಂದ ಆದೇಶ ಹೊರಡಿಸಬೇಕೆಂದು ಹೇಳಿದ್ದಾರೆ. ಇತ್ತೀಚೆಗೆ  ರಾಜ್ಯದಲ್ಲಿ ಪಾಕಿಸ್ತಾನ ಘೋಷಣೆ ಕೂಗುವರು ಹೆಚ್ಚಾಗಿದ್ದಾರೆ. ಬಿಜೆಪಿಯವರೇ ಹೊಸದಾಗಿ ಒಂದು ಶುರು ಮಾಡಿದ್ದಾರೆ. ಅವರೇ ನಾಲ್ಕು ಜನರನ್ನು ಕಳಿಸಿ ಪಾಕಿಸ್ತಾನ ಘೋಷಣೆ ಕೂಗಿಸುತ್ತಾರೆ. ಬಿಜೆಪಿಯವರೇ ಕೆಲವು ಕಡಿಗಳನ್ನು ಕಳಿಸಿ ಘೋಷಣೆ ಕೂಗಿಸ್ತಾರೆಇದ್ದಾರೆ.

ಹೀಗೆ ಘೋಷಣೆ ಕೂಗುವವರನ್ನು ಸ್ಥಳದಲ್ಲೇ ಗುಂಡಿಟ್ಟು ಕೊಲ್ಲಬೇಕು ಕೋರ್ಟ್‌ನಿಂದಲೇ ಹೀಗೆ ಗುಂಡಿಟ್ಟು ಕೊಲ್ಲಲು ಸರ್ಕಾರ ಆದೇಶ ಮಾಡಿಸಬೇಕು.  ಟಿಶ್ಕ್ಯಾಂವ್ ಟಿಶ್ಕ್ಯಾಂವ್ ಟಿಶ್ಕ್ಯಾಂವ್ ಅಂತ ಸ್ಥಳದಲ್ಲೇ ಗುಂಡಿಟ್ಟು ಕೊಲ್ಲಬೇಕು ಆಗ ಬಿಜೆಪಿಯವರಿಗೆ ಹೇಳಲು ಏನೂ ಇರುವುದಿಲ್ಲ ಎಂದು ಬಿಜೆಪಿಯವರ ವಿರುದ್ದ ಗುಡುಗಿದ್ದಾರೆ.

ಬಿಜೆಪಿಯವರಿಗೆ ಹಿಂದೂ ಬೇಡ ಮುಸ್ಲಿಮರು ಬೇಡ ಅವರಿಗೆ ಬೇಕಾಗಿರುವುದು ಕೇವಲ ಅಧಿಕಾರ ಎಂದರು.

Related