ವಿಚ್ಚೇದನ ನಂತರವೂ ಜೊತೆಗೆ ನಟಿಸಲಿದ್ದಾರಾ ಈ ಜೋಡಿ..?

  • In Cinema
  • August 1, 2022
  • 33 Views
ವಿಚ್ಚೇದನ ನಂತರವೂ ಜೊತೆಗೆ ನಟಿಸಲಿದ್ದಾರಾ ಈ ಜೋಡಿ..?

ಚಿತ್ರರಂಗದಲ್ಲಿ ತಮ್ಮ ಸಿನಿಮಾಗಳ ಮೂಲಕ ಬೆಸ್ಟ್ ಜೋಡಿಯಾಗಿ ಗಮನ ಸೆಳೆದಿರುವ ನಾಗಚೈತನ್ಯ ಮತ್ತು ಸಮಂತಾ ವೈಯಕ್ತಿಕ ಜೀವನದಲ್ಲಿ ಬೇರೆಯಾಗುವ ಮೂಲಕ ಫ್ಯಾನ್ಸ್ಗೆ ಶಾಕ್ ನೀಡಿದ್ದರು. ಇದೀಗ ನಾಗಚೈತನ್ಯ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಮಂತಾ ಜತೆ ಮತ್ತೆ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ ನಟ ನೀಡಿರುವ ಉತ್ತರ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.

ಸಿನಿಮಾದಲ್ಲಿ ಮತ್ತು ನಿಜಜೀವನದಲ್ಲಿ ಸಮಂತಾ ಮತ್ತು ನಾಗಚೈತನ್ಯ ಬೆಸ್ಟ್ ಜೋಡಿ ಎಂದೇ ಹೆಸರುವಾಸಿಯಾಗಿದ್ದರು.ಸಮಂತಾ ಜೊತೆ ನೀವು ಮತ್ತೆ ಸಿನಿಮಾ ಮಾಡುತ್ತೀರಾ ಅಂತಾ ನಿರೂಪಕಿ ಕೇಳಿದ್ದಾರೆ. ಈ ಪರಿಸ್ಥಿತಿ ಒದಗಿ ಬಂದಿದರೆ ಅದು ಹುಚ್ಚುತನವಾಗುತ್ತದೆ. ಅದು ನನಗೆ ಗೊತ್ತಿಲ್ಲ. ಇದಕ್ಕೆ ಕಾಲವೇ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಆನ್ಸ್ಕ್ರೀನ್ನಲ್ಲಿ ಅತ್ಯುತ್ತಮ ಕೆಮಿಸ್ಟ್ರಿ ಯಾರ ಜೊತೆ ಎಂದು ಕೇಳಿದಾಗ, ಸಮಂತಾ ಜತೆ ಎಂದು ನಾಗಚೈತನ್ಯ ಉತ್ತರಿಸಿದ್ದರು. ಇದೀಗ ಸಿನಿಮಾ ಕುರಿತಾಗಿ ನಟ ಉತ್ತರಿಸಿರುವ ವಿಚಾರ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಸಮಂತಾ ಚೈತನ್ಯ ಒಟ್ಟಿಗೆ ನಟಿಸುತ್ತಾರಾ ಅಂತಾ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

Related