ಕಾಂಗ್ರೆಸ್ನವರು ಎಷ್ಟೇ ಪ್ರಯತ್ನ ಪಟ್ಟರು ಬಿಜೆಪಿನೇ ಅಧಿಕಾರಕ್ಕೆ ಬರೋದು: ಸತೀಶ್ ರೆಡ್ಡಿ

ಕಾಂಗ್ರೆಸ್ನವರು ಎಷ್ಟೇ ಪ್ರಯತ್ನ ಪಟ್ಟರು ಬಿಜೆಪಿನೇ ಅಧಿಕಾರಕ್ಕೆ ಬರೋದು: ಸತೀಶ್ ರೆಡ್ಡಿ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು ಬೆಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಮತ ಚಲಾಯಿಸಿದರು.

ವಾರ್ಡ್ ನಂಬರ್ 174 ಎಚ್ಎಸ್ಆರ್ ಲೇಔಟ್ ಸೋಮಸಂದ್ರ ಪಾಳ್ಯ ಎಸ್ ವಿ ಆರ್ ಶಾಲಾ ಆವರಣದಲ್ಲಿರುವ ಬೂತ್ ನಲ್ಲಿ ಮತ ಚಲಾಯಿಸಿದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಂ ಸತೀಶ್ ರೆಡ್ಡಿ.

ಮತ ಚಲಾಯಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆಯಿಂದಲೇ ಜನ ಮನೆಯಿಂದ ಹೊರಗಡೆ ಬಂದು ಬಹಳ ಉತ್ಸಾಹದಿಂದ ತಮ್ಮ ನೆಚ್ಚಿನ ನಾಯಕರಿಗೆ ಮತ ಚಲಾಯಿಸುತ್ತಿದ್ದಾರೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದುವರಿಬೇಕೆಂದು ಮತದಾರರು ಮತ ಚಲಾಯಿಸುತ್ತಿದ್ದಾರೆ.

ಇನ್ನು ಬೆಂಗಳೂರು ನಗರದಲ್ಲಿ ಮೂರಕ್ಕೆ ಮೂರು ಕ್ಷೇತ್ರ ಬಿಜೆಪಿ ಪಕ್ಷ ಗೆಲ್ಲಬೇಕು, ಅದರಲ್ಲೂ ಕೂಡ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಅತಿಹೆಚ್ಚಿನ ಮತಗಳ ಅಂತರದಲ್ಲಿಈ ಬಾರಿಯೂ ಕೂಡ ಗೆಲ್ಲಬೇಕೆಂದು ಹೇಳಿದರು.

ತೇಜಸ್ವಿ ಸೂರ್ಯ ಅವರ ಕಳೆದ ಐದು ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ್ತು ನಾನು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ನೋಡಿ ತೇಜಸ್ವಿ ಸೂರ್ಯ ರವರಿಗೆ ಅತಿ ಹೆಚ್ಚು ಮತದಾನ ಮಾಡಿ ಎಂದು ಮತದಾನದಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಹಿಂಭಾಗದಿಂದ ಹಣ ಹಂಚುವುದು, ಹೆಂಡಕೊಡುವಂತಹದ್ದು ಇನ್ನಿತರ ಚಟುವಟಿಕೆಗಳು ನಡೆಯುತ್ತಿವೆ. ಇದು ಕಾಂಗ್ರೆಸ್ ಪಕ್ಷಕ್ಕೆ ಸೊಭೆ ತರುವಂತಹ ಕೆಲಸವಲ್ಲವೆಂದು ಶಾಸಕ ಸತೀಶ್ ರೆಡ್ಡಿ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷದವರು ಮತದಾರರಿಗೆ ಎಷ್ಟು ಕೋಟಿ ದುಡ್ಡು ಕೊಟ್ಟರೂ ಕೂಡ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಬಹುಮತಗಳಿಂದ ಗೆದ್ದು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ನವರು ಎಷ್ಟೇ ದುಡ್ಡು ಕಕ್ಕಿದರು ಕೂಡ ಬಿಜೆಪಿ ಪಕ್ಷನೇ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related