ಈ ಬಾರಿನಾದ್ರೂ ಮದುವೆ ಆಗ್ತಾರೆ ಅನುಷ್ಕಾ ಪ್ರಭಾಸ್?

ಈ ಬಾರಿನಾದ್ರೂ ಮದುವೆ ಆಗ್ತಾರೆ ಅನುಷ್ಕಾ ಪ್ರಭಾಸ್?

ಮಾರ್ಚ್​ನಲ್ಲಿ ನಿಶ್ಚಿತಾರ್ಥ ಮಾಡ್ಕೊಂಡು ಏಪ್ರಿಲ್​ನಲ್ಲಿ ಮದುವೆಯಾಗ್ತಾರಾ ಪ್ರಭಾಸ್-ಅನುಷ್ಕಾ? ಸೈಲೆಂಟಾಗಿ ಮದುವೆಗೆ ರೆಡಿಯಾದ್ರಾ ಬಾಹುಬಲಿ ಜೋಡಿ?

ಕಾಲಿವುಡ್ ನ ಬೆಸ್ಟ್ ಜೋಡಿಗಳೆಂದರೆ ಅದು ಪ್ರಭಾಸ್ ಮತ್ತು ಅನುಷ್ಕಾ ಇವರಿಬ್ಬರು ನಟನೆಯ ಚಿತ್ರಗಳು ಎಲ್ಲವೂ ಸೂಪರ್ ಡೂಪರ್ ಹಿಟ್ ಗಳಾಗಿವೆ.

ಯೆಸ್…ತೆಲುಗು ಚಿತ್ರರಂಗದ ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಈಗಾಗಲೇ ಜೊತೆಯಲ್ಲಿ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ ಮತ್ತು ಇವರಿಬ್ಬರು ಒಳ್ಳೆಯ ಸ್ನೇಹಿತರು ಮತ್ತು ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿ. ಮತ್ತೆ ಇದೀಗ ಪ್ರಭಾಸ್-ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಕಳೆದ ಹಲವಾರು ಬಾರಿ ಅನುಷ್ಕಾ ಮತ್ತು ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದಾದ ನಂತರ ಮತ್ತೆ ಇದೀಗ ಇದೆ ಏಪ್ರಿಲ್ ತಿಂಗಳಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥವಾಗಲಿದ್ದಾರೆ ಎಂಬ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದೀಗ ಮತ್ತೊಮ್ಮೆ ಅವರ ಮದುವೆ ಸುದ್ದಿ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ಅನುಷ್ಕಾ ಪ್ರಭಾಸ್ ಅವರ ಮದುವೆಯ AI ಫೋಟೋಸ್ ವೈರಲ್ ಆಗಿದ್ದವು. ಇದನ್ನು ನೋಡಿದ ಅಭಿಮಾನಿಗಳು ನಿಜಕ್ಕೂ ಖುಷಿಯಾಗಿದ್ದರು.

42ರಲ್ಲೂ ಅನುಷ್ಕಾ ಮದುವೆಯಾಗದೆ ಸಿಂಗಲ್ ಆಗಿದ್ದಾರೆ. ಅನುಷ್ಕಾ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ನಂತರ ನಿರ್ಮಾಪಕರೊಬ್ಬರ ಜೊತೆ ಲವ್​ನಲ್ಲಿದ್ದಾರೆ ಎನ್ನಲಾಯ್ತು. ಆದರೆ ಅಸಲಿಗೆ ಅನುಷ್ಕಾ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ.

ಅನುಷ್ಕಾ ಮದುವೆಯ ಬಗ್ಗೆ ವದಂತಿಗಳು ಹರಡುತ್ತಲೇ ಇವೆ. ಸಾಧಾರಣ ಪ್ರತಿ ವರ್ಷ ಮಾರ್ಚ್ ಕೊನೆಯಲ್ಲಿ ಅವರ ಮದುವೆ ಸುದ್ದಿ ಹರಿದಾಡುತ್ತದೆ. ಇದೀಗ ಮತ್ತೆ ಇವರಿಬ್ಬರ ಮದುವೆ ಸುದ್ದಿ ಶುರುವಾಗಿದೆ.

 

Related