ಪ್ರಧಾನಿ ಮೌನವೇಕೆ ?

ಪ್ರಧಾನಿ ಮೌನವೇಕೆ ?

ಬೆಂಗಳೂರು : ಭಾರತ-ಚೀನಾ ಗಡಿಯಲ್ಲಿ ಸಂಘರ್ಷಕ್ಕೆ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಭಾಯಿ ಭಾಯಿ ಎನ್ನುತ್ತಲೇ ಚೀನಾ ಸೇನೆಯೆ ಕೊಟ್ಟಿರುವ ಆಘಾತದ ಮಧ್ಯೆಯೂ ಭಾರತೀಯ ಸೇನೆಯ ತಿರುಗೇಟು ಕೊಟ್ಟಿದೆ.

ಇದರಿಂದ ಚೀನಾದ 43 ಸೈನಿಕರು ಮೃತಪಟ್ಟಿದ್ದಾರೆ. ಕಳೆದ 45 ವರ್ಷಗಳಲ್ಲಿ ಮೊದಲ ಬಾರಿ ಚೀನಾ ಇಂತಹ ಕುಕೃತ್ಯಕ್ಕೆ ಕೈಹಾಕಿದೆ. ಈ ಮಧ್ಯೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಚೀನಾ ಪಡೆಗಳು ದೇಶದ ಗಡಿಯೊಳಗೆ ನುಗ್ಗಿ ಬಂದರೂ ಈ ವರೆಗೂ ಸರ್ಕಾರದಿಂದ ಒಂದೇ ಒಂದು ಅಧಿಕೃತ ಹೇಳಿಕೆ ಬಂದಿಲ್ಲ. ಇದು ದೇಶದ ಜನರನ್ನು ಚಿಂತೆಗೀಡು ಮಾಡಿದೆ ಎಂದು ಚಿದಂಬರಂ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಮೇ 5 ರಿಂದ ದೇಶದ ಜನತೆಯನ್ನು ಚಿಂತೆಗೀಡುವಂತಹ ದಿವ್ಯ ಮೌನವಹಿಸಿದ್ದಾರೆ. ವಿದೇಶಿ ಸೇನೆ ದೇಶದ ಗಡಿಯನ್ನು ಪ್ರವೇಶಿಸಿದ 7 ವಾರಗಳ ಬಳಿಕವೂ ಒಂದೇ ಒಂದು ಶಬ್ದವನ್ನು ಆಡದಿರುವುದನ್ನು ಉಹಿಸಿಕೊಳ್ಳುವುದು ಅಸಾಧ್ಯ ಎಂದಿದ್ದಾರೆ.

ಜೂ. 16 ರಂದು ಮಧ್ಯಾಹ್ನ 12.52ಕ್ಕೆ ಗಡಿಯಲ್ಲಿ ಯೋಧರು ಹುತಾತ್ಮರಾಗಿದ್ದ ಸುದ್ದಿ ಬ್ರೇಕ್ ಆದ ಬಳಿಕವೂ ವಿದೇಶಾಂಗ ಸಚಿವಾಲಯ ಏನೂ ಆಗೇ ಇಲ್ಲ ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು. ಚೀನಾ ಸೇನೆ ಭಾರತದ ಗಡಿಯನ್ನು ದಾಟಿ ಒಳಬಂದು 7 ವಾರಗಳೇ ಕಳೆದಿವೆ ಎಂಬ ಆರೋಪವನ್ನು ಪಿ. ಚಿದಂಬರಂ ಟ್ವೀಟ್‌ನಲ್ಲಿ ಮಾಡಿದ್ದಾರೆ.

Related