ಈ ಬಾರಿ ಯಾರಿಗೆ ಸಿಗಲಿದೆ ಚಿಕ್ಕಬಳ್ಳಾಪುರ ಟಿಕೆಟ್?!

ಈ ಬಾರಿ ಯಾರಿಗೆ ಸಿಗಲಿದೆ ಚಿಕ್ಕಬಳ್ಳಾಪುರ ಟಿಕೆಟ್?!

ಬೆಂಗಳೂರು: ಲೋಕಸಮಕ್ಕೆ ಈಗಾಗಲೇ ರಾಜ ರಾಜಕೀಯದಲ್ಲಿ ಟಿಕೆಟ್ ಪೈಪೋಟಿ ಜೋರಾಗಿ ನಡೆದಿದ್ದು ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ ಎಂದು ಬಾರಿ ಕುತೂಹಲ ಕೆರಳಿಸಿದೆ.

ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದಂತಹ ಸುಧಾಕರ್ ಅವರು ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ನಾನು ಹೇಳಿದ ಹಾಗೆ ಕೇಳುತ್ತಾರೆ ಎಂದು ತಿಳಿದುಕೊಂಡಿದ್ದರು. ಆದರೆ ಈಗ ಮಾಜಿ ಸಚಿವ ಡಾ. ಸುಧಾಕರ್ ಏಕಾಂಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಸಭೆ ಚುನಾವಣೆಯಲ್ಲಿ ಸೋತಮೇಲೆ ಸುಧಾಕರ್ ರಾಜಕೀಯ ಜೀವನ‌ ಅತಂತ್ರವಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ಗಾಗಿ ಒತ್ತಡ ಹೇರಿದ್ರು ಕ್ಯಾರೆ ಎನ್ನದ ಬಿಎಸ್ ಯಡಿಯೂರಪ್ಪ ಸುಧಾಕರ್ ಬಿಜೆಪಿಯ ಘಟಾನುಘಟಿ ನಾಯಕರನ್ನು ಭೇಟಿಯಾದ್ರು ನೋ ರೆಸ್ಪಾನ್ಸ್ ಎಂಬುದು ತಿಳಿದು ಬಂದಿದೆ

ಈ ಹಿನ್ನೆಲೆಯಲ್ಲಿ ರಾಜ್ಯದ ಟಿಕೆಟ್ ಲಿಸ್ಟ್ ನಲ್ಲಿ ಚಿಕ್ಕಬಳ್ಳಾಪುರ ಪೆಂಡಿಂಗ್ ಇದ್ದು ಸುಧಾಕರ್ ಹೊರತುಪಡಿಸಿ ಬೇರೆ ಅಭ್ಯರ್ಥಿಗಾಗಿ ಹುಡುಕಾಡ್ತಿರುವ ಕೇಸರಿ ಪಡೆ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಗೆ ಚಿಕ್ಕಬಳ್ಳಾಪುರ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ ಎಂದು ತಿಂಇದು ಬಂದಿದೆ.

 

Related