ಯಾರಿಗೆ ಸಿಗಲಿದೆ ಮೈಸೂರಿನಲ್ಲಿ ಬಿಜೆಪಿ ಟಿಕೆಟ್?

ಯಾರಿಗೆ ಸಿಗಲಿದೆ ಮೈಸೂರಿನಲ್ಲಿ ಬಿಜೆಪಿ ಟಿಕೆಟ್?

ಬೆಂಗಳೂರು: ಲೋಕ ಸಮರ ಸಮೀಪಿಸುತ್ತಿದ್ದಂತೆ ರಾಜ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಇನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದು ಅನುಮಾನವೆಂದು ತಿಳಿದು ಬಂದಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಹೊಸ ಅಭ್ಯರ್ಥಿಗಳಿಗೆ ಮಣಿ ಹಾಕಿದ್ದು, ಮೈಸೂರು ಕ್ಷೇತ್ರದಲ್ಲಿ, ಮೈಸೂರಿನ ರಾಜ ರಾಗಿರುವಂತಹ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಬಹುದೆಂದು ಈಗಾಗಲೇ ರಾಜ್ಯ ಬಿಜೆಪಿಯದಲ್ಲಿ ಗ್ರಾಸವಾಗಿ ಚರ್ಚೆಯಾಗುತ್ತಿದೆ. ಹಾಗಾದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪುತ್ತಾ ಎಂದು ಕೆಲವರ ಪ್ರಶ್ನೆಯಾಗಿದೆ.

ಇನ್ನು ಈ ಬಗ್ಗೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಆಗಿರೋದನ್ನು ನಾನು ಹೇಳಲ್ಲ. ಆದರೆ, 28 ಕ್ಷೇತ್ರಗಳಿಗೆ ಉತ್ತಮ ಅಭ್ಯರ್ಥಿ ಕೊಡುತ್ತೇವೆ ಎಂದು ಹೇಳಿದರು.

3-4 ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳಲಿದೆ. 2 ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಪರವಾಗಿದೆ ವಾತಾವರಣವಿದೆ. ನರೇಂದ್ರ ಮೋದಿಯವರ ಯೋಜನೆಗಳನ್ನು ಜನರು ಮೆಚ್ಚಿದ್ದಾರೆ. ನರೇಂದ್ರ ಮೋದಿ ನಾಯಕತ್ವ ಉತ್ತಮ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. 28 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿ ಆಯ್ಕೆ ಮುಂದುವರೆದಿದೆ ಎಂದರು.

ರಾಜ್ಯದ ಎಲ್ಲ ಅಭ್ಯರ್ಥಿ ಬಗ್ಗೆಯೂ ವರಿಷ್ಠರು ಅವಲೋಕಿಸಿದ್ದಾರೆ. 23-24-25 ಪ್ರಶ್ನೆ ಅಲ್ಲ, ಅತ್ಯುತ್ತಮ ಫಲಿತಾಂಶದ ಇತಿಹಾಸವನ್ನು ಬಿಜೆಪಿ ನಿರ್ಮಿಸಲಿದೆ. 3-4 ದಿನಗಳಲ್ಲಿ ಅಭ್ಯರ್ಥಿ ಅಯ್ಕೆ ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.

 

Related