ಲೋಕಸಮರಕ್ಕೆ ಮಂಡ್ಯ ಕ್ಷೇತ್ರದಿಂದ ಯಾರಿಗೆ ಸಿಗಲಿದೆ ಮೈತ್ರಿ ಟಿಕೆಟ್?

ಲೋಕಸಮರಕ್ಕೆ ಮಂಡ್ಯ ಕ್ಷೇತ್ರದಿಂದ ಯಾರಿಗೆ ಸಿಗಲಿದೆ ಮೈತ್ರಿ ಟಿಕೆಟ್?

ಮಂಡ್ಯ: ಸದ್ಯ ರಾಜ ರಾಜಕೀಯದಲ್ಲಿ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು ಲೋಕಸಭಾ ಚುನಾವಣೆಗೆಂದೆ ಮೈತ್ರಿಯನ್ನು ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ಈ ಬಾರಿ 28 ಕ್ಷೇತ್ರಕ್ಕೆ 28 ಕ್ಷೇತ್ರವನ್ನು ಗೆಲ್ಲುವ ಭರವಸೆಯನ್ನು ಹೊಂದಿದೆ.

ಕಳೆದ ಬಾರಿ ಮಂಡ್ಯ ಕ್ಷೇತ್ರವು ಹೈ ವೋಲ್ಟೇಜ್ ಆಗಿ ಏರ್ಪಟ್ಟಿದ್ದು ಈ ಬಾರಿ ಕೂಡ ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಆಗಿರುವುದರಿಂದ ಹೈಕಮಾಂಡ್ ಈ ಬಾರಿ ಯಾರಿಗೆ ಟಿಕೆಟ್ ನೀಡುತ್ತದೆ ಎಂದು ಕುತೂಹಲ ಕೆರಳಿಸಿದೆ.

ಇನ್ನು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

ಆದ್ದರಿಂದ ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆಗೆ ಯಾರಿಗೆ ಟಿಕೆಟ್ ಸಿಗುತ್ತದೆ ಎಂದು ರಾಜ್ಯದ ಜನತೆ ಚಿತ್ತ ಮಂಡ್ಯ ಕ್ಷೇತ್ರದತ್ತ ಆಗಿದೆ.

ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕೆಂದು ದಳಪತಿಗಳು ಒತ್ತಡ ಹಾಕಲಿದ್ದಾರೆ. ನೀವು ಬನ್ನಿ ಇಲ್ಲ ನಿಖಿಲ್ ಮನವೊಲಿಸಿ ಎಂದು ಕುಮಾರಸ್ವಾಮಿಗೆ ಮನವಿ ಮಾಡಲಿದ್ದಾರೆ. ಮಂಡ್ಯದಿಂದ ಮಾಜಿ ಸಚಿವರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್‌ಗೌಡ ಟಿಕೆಟ್ ಆಕಾಂಕ್ಷಿತರು. ಮೂವರಲ್ಲಿ ಒಬ್ಬರು ಸ್ಪರ್ಧೆ ಮಾಡಿ ನಾವು ಇರ್ತೀವಿ ಎಂದು ಕುಮಾರಸ್ವಾಮಿ ಅವರು ಹೇಳುವ ಸಾಧ್ಯತೆ ಇದೆ.

 

Related