ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್: ರಾಹುಲ್ ಗಾಂಧಿ

ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್: ರಾಹುಲ್ ಗಾಂಧಿ

ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವಕುಮಾರ್ ಅವರ ಪರವಾಗಿ ಭರ್ಜರಿ ಮತ ಪ್ರಚಾರವನ್ನು ಮಾಡಿದ್ದಾರೆ. ಇನ್ನು ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್  ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ 400ಕ್ಕೂ ಅಧಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು, ಪ್ರಜ್ವಲ್ ಬಗ್ಗೆ ಸಮರ್ಥನೆ ಮಾಡಿಕೊಂಡು, ಅವರಿಗೆ ಮತ ಹಾಕಿದ್ರೆ ನನಗೆ ವೋಟ್​ ಹಾಕಿದಂತೆ ಅಂತಿದ್ದಾರೆ. ಪ್ರಜ್ವಲ್ ಮಾಡಿರೋದರ ಬಗ್ಗೆ ಪ್ರಧಾನಿಗಳಿಗೂ ಗೊತ್ತಿತ್ತು. ಬಿಜೆಪಿಯ ಪ್ರತಿ ನಾಯಕರಿಗೂ ಗೊತ್ತಿತ್ತು. ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್ ಎಂದು ರಾಹುಲ್ ಗಾಂಧಿ ಗುಡುಗಿದರು.

ಇನ್ನು ಈ ಬಾರಿ ಲೋಕಸಭಾ ಚುನಾವಣೆಗೆಂದು ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರ ಕೈಕೈ ಹಿಡಿದು, ಒಂದೇ ವೇದಿಕೆಯಲ್ಲಿ ಮೋದಿ ಪ್ರಚಾರ ಮಾಡಿದ್ದಾರೆ. ಅದಕ್ಕಾಗಿ ದೇಶದ ಮಹಿಳೆಯರಲ್ಲಿ ಮೋದಿ, ಗೃಹ ಸಚಿವ ಅಮಿತ್ ಶಾ ಎಲ್ಲಾ ಮಹಿಳೆಯರ ಮುಂದೆ ತಲೆಬಾಗಿ ಕ್ಷಮೆ ಕೇಳಬೇಕು ಎಂದು ರಾಹುಲ್ ಗಾಂಧಿ ಗುಡುಗಿದರು.

ಮಾಸ್ ರೇಪಿಸ್ಟ್ ಪರ ಮೋದಿ ಪ್ರಚಾರ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಮೋದಿಯವರ ಗ್ಯಾರಂಟಿ, ಒಬ್ಬ ಮಾಸ್ ರೇಪಿಸ್ಟ್​​​ಗೆ ರೇಪ್​​ನ ಗ್ಯಾರಂಟಿ. ದೇಶದಿಂದ ಅವನನ್ನು ಹೊರಗೆ ಹೋಗಲು ಮೋದಿ ಅವಕಾಶ ಕೊಟ್ಟಿದ್ದಾರೆ. ಅವರ ಬಳಿ ಸಿಬಿಐ ಸೇರಿ ಎಲ್ಲವೂ ಅಧಿಕಾರ ಇದೆ. ಆದರೂ ಇಂತಹ ರೇಪಿಸ್ಟ್ ನನ್ನು ದೇಶದಿಂದ ಹೊರಗೆ ಹೋಗಲು ಬಿಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.

 

Related