ಡಿಕೆಶಿ ಯಾವಾಗ ಒಕ್ಕಲಿಗ ಲೀಡರ್ ಆದ್ರು..? : ಆರ್ ಅಶೋಕ್

ಡಿಕೆಶಿ ಯಾವಾಗ ಒಕ್ಕಲಿಗ ಲೀಡರ್ ಆದ್ರು..? : ಆರ್ ಅಶೋಕ್

ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗ ನಾಯಕರುಗಳ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.

ಹೌದು, ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ನಡುವೆ ಕಳೆದ ಎರಡು-ಮೂರು ದಿನಗಳಿಂದಲೂ ವಾಕ್ ಸಮರ ಜೋರಾಗಿ ನಡೆಯುತ್ತಿದ್ದು ಇದರ ಮಧ್ಯೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪ್ರತಿಕ್ರಿಯೆ ನೀಡಿ, ನಾನು ಇದರ ಬಗ್ಗೆ ಏನು ಹೆಚ್ಚಿಗೆ ಮಾತನಾಡುವುದಿಲ್ಲ ಹಿರಿಯ ನಾಯಕರುಗಳಾಗಿ ಅವರವರುಗಳೇ ಹೀಗೆ ಮಾತನಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವೈಯಕ್ತಿಕ ಆರೋಪ ಪ್ರತಿ ಆರೋಪಗಳು ನಡೀತಿವೆ. ಇದರ ಬಗ್ಗೆ ನಾನು ಮಾತಾಡಲ್ಲ. ಆದರೆ ಕುಮಾರಸ್ವಾಮಿ ಈಗ ನಮ್ಮ ಪಾರ್ಟ್ನರ್, ಎನ್​ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗಾಗಿ ನಾವು ಕುಮಾರಸ್ವಾಮಿ ಪರ ನಿಲ್ಲುತ್ತೇವೆ ಎಂದು ಹೇಳಿದರು.

ಇನ್ನೂ ಡಿಸಿಎಂ ಡಿ.ಕೆ ಶಿವಕುಮಾರ್ ಯಾವಾಗ ಒಕ್ಕಲಿಗ ಲೀಡರ್ ಆದ್ರು? ಡಿ ಕೆ ಶಿವಕುಮಾರ್ ಒಕ್ಕಲಿಗರಿಗೆ ಏನು ಮಾಡಿದ್ದಾರೆ.? ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿದೆ, ಆವಾಗ್ಗೆ ಡಿ ಕೆ ಶಿವಕುಮಾರ್ ಸುಮ್ಮನಾಗಿದ್ದರು. ಇಡೀ ಸಮುದಾಯವೇ ಜಾತಿ ಗಣತಿ ವಿರೋಧಿಸಿ ನಿಂತರೂ ಸರ್ಕಾರದ ಭಾಗವಾಗಿದ್ದ ಡಿ ಕೆ ಶಿವಕುಮಾರ್ ರಿಸೈನ್ ಮಾಡಿದರಾ? ಒಕ್ಕಲಿಗ ಸಮುದಾಯಕ್ಕಾಗಿ ರಾಜೀನಾಮೆ ನೀಡಿ ಸಂಪುಟದಿಂದ ಹೊರಬಂದು ಪ್ರತಿಭಟಿಸಬೇಕಿತ್ತು ಎಂದರು.

 

Related