ಪ್ರಜ್ವಲ್ ಜೆಡಿಎಸ್ ನಿಂದ ಉಚ್ಚಾಟನೆ ಆರ್ ಅಶೋಕ್ ಹೇಳಿದ್ದೇನು..?

ಪ್ರಜ್ವಲ್ ಜೆಡಿಎಸ್ ನಿಂದ ಉಚ್ಚಾಟನೆ ಆರ್ ಅಶೋಕ್ ಹೇಳಿದ್ದೇನು..?

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಬಾರಿ ಗ್ರಾಸವಾಗಿ ಚರ್ಚೆಯಾಗುತ್ತಿದ್ದು, ಇಂದು ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಉಚ್ಚಾಟನೆ ಮಾಡಿದ್ದಾರೆ.

ಇನ್ನು ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ರಾಜ್ಯಧ್ಯಕ್ಷ ಆರ್ ಅಶೋಕ್, ಕಾನೂನು ದೇವತೆ ಮುಂದೆ ಎಲ್ಲರೂ ಸಮಾನರು. ಯಾರು ದೊಡ್ಡವರಲ್ಲ ಯಾರು ಚಿಕ್ಕವರಲ್ಲ, ಹಾಗಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತದೆ ಎಂದು ಹೇಳಿದ್ದಾರೆ.

ನಗರದಲ್ಲಿ ಸುತ್ತಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ನಡೆದು ನಮ್ಮ ಬಿಜೆಪಿ ಪಕ್ಷದ ನಡೆ ಎಂದು ಹೇಳಿದರು. ಇನ್ನುಈ ಘಟನೆ ಸಂಬಂಧಿ ಸಿದಂತೆ ಎಫ್ಐಆರ್ ದಾಖಲು ಆಗಿರುವುದನ್ನು ಗಮನಿಸಿದ್ದೇನೆ. ಈಗಾಗಲೇ ಇದರ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಅವರೂ ಮಾತನಾಡಿದ್ದಾರೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಎಲ್ಲರೂ ಸಮಾನರು, ಸರ್ಕಾರ ಎಸ್‌ಐಟಿ ರಚಿಸಿದೆ, ಕಾನೂನು ಪ್ರಕಾರ ಸರ್ಕಾರ ಕ್ರಮ ವಹಿಸಲಿದೆ, ಕುಮಾರಸ್ವಾಮಿ ನಿಲುವೇ ನಮ್ಮ ನಿಲುವಾಗಿದೆ ಎಂದರು.

ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಬೇಕು ಅನ್ನೋ ಡಿ.ಕೆ.ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲ, ರಕ್ಷಣೆ ಕೊಡಲಿ ಹುಬ್ಬಳ್ಳಿ ನೇಹಾ ಪ್ರಕರಣ ನಡೆದಿದೆ, ಅಂಥವರಿಗೂ ರಕ್ಷಣೆ ಕೊಡಬೇಕು, ಇವರಿಗೂ ರಕ್ಷಣೆ ಕೊಡಲಿ ಎಲ್ಲರಿಗೂ ಸರ್ಕಾರ ರಕ್ಷಣೆ ಕೊಡಲಿ ಎಂದು ಹೇಳಿದರು.

 

Related