ಎಲ್ಲರೂ ಏ.26ರಂದು ತಪ್ಪದೆ ಮತ ಚಲಾಯಿಸಿ: ತುಷಾರ್ ಗಿರಿ ನಾಥ್

ಎಲ್ಲರೂ ಏ.26ರಂದು ತಪ್ಪದೆ ಮತ ಚಲಾಯಿಸಿ: ತುಷಾರ್ ಗಿರಿ ನಾಥ್

ಬೆಂಗಳೂರು: ಏಪ್ರಿಲ್ 26ರಂದು ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಎಲ್ಲರೂ ಮತ ಚಲಾಯಿಸಬೇಕೆಂಬ ಉದ್ದೇಶದಿಂದ ಇಂದು (ಸೋಮವಾರ ಏಪ್ರಿಲ್ 22) ರಂದು ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಲಹಂಕ ನ್ಯೂ ಟೌನ್ ನಲ್ಲಿರುವ ಹೊಯ್ಸಳ ಮೈದನಾದಲ್ಲಿ ಏರ್ಪಡಿಸಿದ್ದ ಮಾನವ ಸರಪಳಿ ಹಾಗೂ ಜಾಗೃತಿ ಜಾಥಾಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು.

ಬೃಹತ್ ಮಾನವ ಸಪಳಿ ನಿರ್ಮಾಣ:

ಯಲಹಂಕ ನ್ಯೂ ಟೌನ್ ನಲ್ಲಿರುವ ಹೊಯ್ಸಳ ಮೈದಾನದಲ್ಲಿ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿ ಮತದಾನ ಪ್ರತಿಜ್ಙಾ ವಿಧಿ ಸ್ವೀಕರಿಸುವ ಜೊತೆಗೆ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.

ಕಾಲ್ನಡಿಗೆ ಜಾಥಾ ಸಾಗಿದ ಹಾದಿ:

ಯಲಹಂಕ ನ್ಯೂ ಟೌನ್ ನಲ್ಲಿರುವ ಹೊಯ್ಸಳ ಮೈದಾನದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾ ನ್ಯೂ ಟೌನ್ ಮುಖ್ಯರಸ್ತೆ ಮಾರ್ಗವಾಗಿ 16ನೇ ಬಿ ಕ್ರಾಸ್ ರಸ್ತೆ, ಚಿಕ್ಕಬೊಮ್ಮಸಂದ್ರ ವೃತ್ತ, ಜ್ಞಾನಜ್ಯೋತಿ ವೃತ್ತ, 2ನೇ ಎ ಕ್ರಾಸ್ ರಸ್ತೆ ಮೂಲಕ ಸಾಗಿ ಶೇಷಾದ್ರಿಪುರಂ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡಿತು.

ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಚುನಾವಣಾ ರಾಯಭಾರಿಯಾದ ನೀತು ವನಜಾಕ್ಷಿ, ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಅಪೂರ್ವ ಕುಲಕರ್ಣಿ, ರಮೇಶ್, 1000ಕ್ಕೂ ವಿದ್ಯಾರ್ಥಿಗಳು, ಅಧಿಕಾರಿ/ಸಿಬ್ಬಂದಿಗಳು, ನಾಗರೀಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Related