ಬಿಜೆಪಿ-ಜೆಡಿಎಸ್ ಆಯೋಜಿಸಿದ್ದ ವಿಜಯ ಸಂಕಲ್ಪದಲ್ಲಿ ಒಡೆಯರ್ ಹೇಳಿದ್ದೇನು?

ಬಿಜೆಪಿ-ಜೆಡಿಎಸ್ ಆಯೋಜಿಸಿದ್ದ ವಿಜಯ ಸಂಕಲ್ಪದಲ್ಲಿ ಒಡೆಯರ್ ಹೇಳಿದ್ದೇನು?

ಮೈಸೂರು: ಇದೇ ಮೊದಲ ಬಾರಿ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿರುವ ಮೈಸೂರಿನ ರಾಜಕುಮಾರ ಯದುವೀರ್ ಒಡೆಯರ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿದಿದ್ದಾರೆ.

ಮೈಸೂರಿನ ಮಹಾರಾಜ ಮೈದಾನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಒಳತಿಗಾಗಿ ನನ್ನ ಪೂರ್ವಜ್ಜರು ಹೇಗೆ ಆಡಳಿತ ನಡೆಸಿದ್ದಾರೆ ಅದೇ ರೀತಿ ನಾನು ಕೂಡ ಜನರ ಪರವಾಗಿ ಒಳ್ಳೆಯ ಕಾರ್ಯವನ್ನು ಮಾಡಲು ನನಗೊಂದು ಸುವರ್ಣ ಅವಕಾಶ ಒದಗಿದ್ದು ನಾನು ಕೂಡ ಅವರ ದಾರಿಯಲ್ಲೇ ಬದುಕುತ್ತೇನೆ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ನನ್ನ ಪೂರ್ವಜರು ಅರಮನೆಯಲ್ಲಿ ಆಡಳಿತ ನಡೆಸುತ್ತಿದ್ದಾಗ ಜನರ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ನಾನು ಅರಮನೆಯಲ್ಲಿ ಹುಟ್ಟಿ ಬೆಳೆದರೂ ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಜನರೊಂದಿಗೆ ನಿಂತು ಅವರ ಶ್ರೇಯೋಭಿವೃದ್ಧಿಗಾಗಿ ಪ್ರತಿಪಾದಿಸುವ ಸಂಕಲ್ಪ ಮಾಡಿದ್ದೇನೆ. ಚಾಮುಂಡೇಶ್ವರಿ ದೇವಿಯ ರಥವನ್ನು ಒಡೆಯರ್‌ಗಳು ಎಳೆದಂತೆಯೇ, ಈಗ ಪ್ರಧಾನಿ ಮೋದಿಯವರೊಂದಿಗೆ ಭಾರತ ಮಾತೆಯ ರಥವನ್ನು ಮುನ್ನಡೆಸುತ್ತೇನೆ. ಇದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

 

 

Related