ಬಿಜೆಪಿ ಸೇರ್ಪಡೆ ಬಗ್ಗೆ ನಟ ಪ್ರಕಾಶ್ ರಾಜ್ ಹೇಳಿದ್ದೇನು?

ಬಿಜೆಪಿ ಸೇರ್ಪಡೆ ಬಗ್ಗೆ ನಟ ಪ್ರಕಾಶ್ ರಾಜ್ ಹೇಳಿದ್ದೇನು?

ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲ ಮತ್ತು ಆಪರೇಷನ್ ಹಸ್ತ ಜೋರಾಗಿ ನಡೆಯುತ್ತಿದ್ದು, ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಅವರು ಬಿಜೆಪಿ ಸೇರ್ಪಡೆ ಯಾಗುತ್ತಾರೆ ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದರ ಬಗ್ಗೆ ಪ್ರಕಾಶ್ ರಾಜ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ನಾನು ಬಿಜೆಪಿಗೆ ಸೇರಿಕೊಳ್ಳುತ್ತೇನೆಂಬ ಸುದ್ದಿಗಳು ಹರಿದಾಡುತ್ತಿರುವುದು ಸುಳ್ಳು ಹಾಗಾಗಿ ಇದನ್ನು ಯಾರು ನಂಬಬೇಡಿ ಎಂದು ಸ್ಪಷ್ಟವಾಗಿ  ತಮ್ಮ ಎಕ್ಸ್ ಖಾತೆಯ ಮೂಲಕ ತಿಳಿಸಿದ್ದಾರೆ.

ಬಿಜೆಪಿಯವರಿಗೆ ನನ್ನನ್ನು ಖರೀದಿಸುವಂತಹ ಶ್ರೀಮಂತ ಸಿದ್ಧಾಂತ ಅವರಿಗಿಲ್ಲ ಎಂದು ಅರಿತುಕೊಂಡಿರಬೇಕು ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನೀವು ಏನು ಯೋಚಿಸುತ್ತಿದ್ದೀರಾ ಎಂದು ಕೇಳಿದ್ದಾರೆ.

Related