ಸಮಾಜ ಒಡೆಯುವುದೇ ಬಿಜೆಪಿಯವರು ಮಾಡುವ ಕೆಲಸ: ಸಿಎಂ

 ಸಮಾಜ ಒಡೆಯುವುದೇ ಬಿಜೆಪಿಯವರು ಮಾಡುವ ಕೆಲಸ: ಸಿಎಂ

ಬೆಂಗಳೂರು: ಇಂದು ಸದನದ ಕೊನೆಯ ದಿನವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಪಕ್ಷಗಳ ಮೇಲೆ ಚಾಟಿ ಯನ್ನು ಬೀಸಿದ್ದಾರೆ. ಹೌದು ನಮ್ಮ ಸರ್ಕಾರದ ವಿರುದ್ಧ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವು ಸೇರಿಕೊಂಡು ವಿಧಾನಸೌಧದ ಒಳಗಡೆ ಗಾಂಧಿ ಪ್ರತಿಮೆ ಮುಂದೆ ಧರಣಿ ಮಾಡುತ್ತಿರುವುದು ಯಾರಿಗೆ ಎಷ್ಟು ಒಳ್ಳೆಯದಾಗುತ್ತಿದೆ ಎಂದು ಪ್ರಶ್ನಿಸಿದರು.

ಗಾಂಧಿ ಪ್ರತಿಮೆ ಮುಂದೆ ಕುಳಿತು ಬಿಜೆಪಿಯವರು ಧರಣಿ ನಡೆಸಿದ್ದಾರೆ. ಬಿಜೆಪಿ ನಾಯಕರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು. ಗಾಂಧಿ ಕೊಂದವರು ಅದೇ ಪ್ರತಿಮೆ ಮುಂದೆ ಧರಣಿ ನಡೆಸಿದ್ದು ವಿಪರಿಯಾಸ. ಸುಳ್ಳು ಹೇಳುವುದು, ಸಂಘರ್ಷ ಉಂಟು ಮಾಡುವುದು, ಸಮಾಜ ಒಡೆಯುವುದೇ ಬಿಜೆಪಿಯವರು ಮಾಡುವ ಕೆಲಸ ಎಂದು ಚಾಟಿ ಬೀಸಿದರು

ವಿರೋಧ ಪಕ್ಷದವರು ಇಲ್ಲದೆಯೇ ಉತ್ತರ ನೀಡುತ್ತಿದ್ದೇನೆ. ಇದು ಬಿಜೆಪಿ, ಜೆಡಿಎಸ್​ನ ಜನವಿರೋಧಿ ನೀತಿ ಎಂದು ಗೊತ್ತಾಗುತ್ತೆ. ವಿಪಕ್ಷಗಳಿಗೆ ಟೀಕೆ ಮಾಡುವುದು, ಧರಣಿ ನಡೆಸುವ ಹಕ್ಕು ಇದೆ. ಸದನದ ಬಾವಿಗಿಳಿದು ಸರ್ಕಾರದ ಗಮನ ಸೆಳೆಯುವುದು ಅವರ ಹಕ್ಕು. ಆದರೆ ಡೆಪ್ಯುಟಿ ಸ್ಪೀಕರ್​ ವಿರುದ್ಧ ಅಮಾನುಷವಾಗಿ ನಡೆದುಕೊಂಡ್ರು. ಹೀಗಾಗಿ ಅನಾಗರಿಕವಾಗಿ ನಡೆದುಕೊಂಡ ಕೆಲ ಶಾಸಕರನ್ನು ಅಮಾನತು ಮಾಡಲಾಗಿದೆ. ಬಿಜೆಪಿ, ಜೆಡಿಎಸ್​​ ಸದನಕ್ಕೆ ಹಾಜರಾಗಬೇಕಿತ್ತು, ಆದರೆ ಹಾಜರಾಗಿಲ್ಲ ಎಂದು ಕಿಡಿಕಾರಿದರು.

 

Related