ಕಂಟ್ರಿ ಬಾಂಬ್ : ಸಂಸದ ಕಿಡಿ

ಕಂಟ್ರಿ ಬಾಂಬ್ : ಸಂಸದ ಕಿಡಿ

ಕೋಲ್ಕತ್ತಾ: ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಕಂಟ್ರಿ ಬಾಂಬ್ ಎಸೆಯುವ ಮೂಲಕ, ಕೆಮಿಕಲ್ ಮಿಶ್ರಿತ ವಾಟರ್ ಕ್ಯಾನನ್ ಸಿಂಪಡಣೆ, ಅನಾಗರಿಕ ರೀತಿಯಲ್ಲಿ ಕಂಡ ಕಂಡವರ ಮೇಲೆ ಲಾಠಿ ಚಾರ್ಜ್ ನಡೆಸಿ ನಾಗರಿಕರ ಮೇಲೆ ದೌರ್ಜನ್ಯ ಎಸಗಿರುವುದು ಘೋರ ಅಪರಾಧ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರು ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ತೇಜಸ್ವೀ ಸೂರ್ಯ ಮಮತಾ ಬ್ಯಾನರ್ಜಿ ಸರ್ಕಾರದ ಅನಾಗರಿಕ ನಡುವಳಿಕೆ ಕುರಿತು ಹರಿಹಾಯ್ದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಪ್ರಾಯೋಜಿತ ಹಿಂಸಾಚಾರ ಮಿತಿ ಮೀರಿದ್ದು ,ಎಡರಂಗವು ಬಂಗಾಳದಲ್ಲಿ ಕೈಗಾರಿಕೆಗಳನ್ನು ಧ್ವಂಸಗೊಳಿಸಿದರೆ, ಟಿಎಂಸಿ ಯು ತನ್ನ ಗೂಂಡಾಗಳಿಂದ ಬಿಜೆಪಿಯ 120ಕ್ಕೂ ಅಧಿಕ ಕಾರ್ಯಕರ್ತರನ್ನು ಕೊಲ್ಲುವ ಮೂಲಕ ಪ್ರಜಾಪ್ರಭುತ್ವವನ್ನು ಮಣ್ಣುಪಾಲು ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಸರ್ವಾಧಿಕಾರಿ ಧೋರಣೆಯ ಮಮತಾ ಬ್ಯಾನರ್ಜಿ ಯಟಿಎಂಸಿ ಸರ್ಕಾರವನ್ನು ಕಿತ್ತೆಸೆದು, ಪ್ರಜಾಪ್ರಭುತ್ವವನ್ನು ಸ್ಥಾಪಿಸಿ, ಪಶ್ಚಿಮ ಬಂಗಾಳ ಅಭಿವೃದ್ಧಿಗೆ ಶ್ರಮಿಸಲು ಬಿಜೆಪಿ ಯುವ ಮೋರ್ಚಾ ಪ್ರತಿಜ್ಞೆ ಕೈಗೊಂಡಿದ್ದು, ಈ ಕಾರ್ಯ ಸಾಧನೆಗೆ ಎಂತಹದ್ದೇ ಅಡ್ಡಿ ಬಂದರೂ ಕೂಡ ಪ.ಬಂಗಾಳದಲ್ಲಿ ಕಮಲ ಅರಳಿಸಿಯೇ ತೀರುತ್ತೇವೆ” ಎಂದು ಸಂಕಲ್ಪ ಕೈಗೊಂಡಿರುವ ಕುರಿತು ತೇಜಸ್ವೀ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Related