ಭದ್ರಾ ನದಿಗೆ ನೀರು ಅಚ್ಚುಕಟ್ಟು ಪ್ರದೇಶದ ರೈತರಿಗೆ ಫುಲ್ ಖುಷ್!

  • In State
  • August 10, 2023
  • 150 Views
ಭದ್ರಾ ನದಿಗೆ ನೀರು ಅಚ್ಚುಕಟ್ಟು ಪ್ರದೇಶದ ರೈತರಿಗೆ ಫುಲ್ ಖುಷ್!

ಶಿವಮೊಗ್ಗ: ಭದ್ರಾ ಕಾಲುವೆಗೆ ನೀರು ಹರಿಸಲು ಡೇಟ್ ಫಿಕ್ಸ್ ಮಾಡಲು ನೀರಾವರಿ ನಿಗಮ ತಿರ್ಮಾನಿಸಿದೆ. ಇದರ ಜೊತೆಗೆ ರೈತರಿಗೆ ನೀರು ಕಡಿಮೆಯಾಗಿ ಬೆಳೆ ಬರದಿದ್ದರೆ ಇಲಾಖೆ ಜವಾಬ್ದಾರಿಯಲ್ಲ ಎಂದು ಕೂಡ ಹೇಳಿದೆ.

ಆಗಷ್ಟ್ 10 ರಿಂದ 100 ದಿನಗಳ ಕಾಲ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದಾಗಿ ಪ್ರಕಟಣೆ ಹೊರಡಿಸಿದೆ, ಪ್ರಸ್ತುತ ಜಲಶಯದಲ್ಲಿ 166 ಅಡಿ ನೀರು ಇದೆ ಎಂದು ಜಾಲಶಯ ಮಂಡಳಿ ತಿಳಿಸಿದೆ.

ಯಾವ ಕಾಲುವೆಗೆ ಎಷ್ಟೆಷ್ಟು ನೀರು

ಆಗಷ್ಟ್ 10 ರಿಂದ ನೂರು ದಿನಗಳ ಕಾಲ ಎಡದಂಡೆ ಕಾಲುವೆಗೆ 380 ಕ್ಯೂಸೆಕ್ಸ್ ನೀರು ಹರಿಸಲಾಗುವುದು. ಒಳ ಹರಿವಿನ ಆಧಾರದ ಮೇಲೆ ನೀರು ಹರಿಸಲಾಗುತ್ತಿದೆ, ನೀರಿನ ಕೊರತೆಯಿಂದ ರೈತರ ಬೆಳೆ ನಷ್ಟವಾದಲ್ಲಿ ಇಲಾಖೆ ಜವಾಬ್ದಾರಿಯಲ್ಲ. ಭದ್ರಾ ಜಲಾಶಯ ವ್ಯಾಪ್ತಿಯ 1.07 ಲಕ್ಷ ಹೆಕ್ಟೇರ್ನಲ್ಲಿ ಮುಂಗಾರು ಬೆಳೆ ಬೆಳೆಯಲು ಅವಕಾಶವಿದ್ದು ನಿಗದಿತ ವಿಸ್ತೀರ್ಣ ದಲ್ಲಿ ಬೆಳೆ ಬೆಳೆಯಲು ರೈತರು ಸಹಕರಿಸಬೇಕು ಎಂದು ತಿಳಿಸಲಾಗಿದೆ.ಮಳೆ ಕೈಕೊಟ್ಟರೆ  ರೈತರು  ನಷ್ಟ ಅನುಭವಿಸುವುದು ಖಚಿತ. ಈ ನಿಟ್ಟಿನಲ್ಲಿ ರೈತರಿಗೆ ಬೆಳೆ ನಷ್ಟ ಅನುಭವಿಸಿದರೆ ಇಲಖೆ ಜವಾಬ್ಧಾರಿಯಲ್ಲ ಎಂದು ನೀರಾವರಿ ಇಲಾಖೆ ಪುನರುಚ್ಚರಿಸಿದೆ.

ವರದಿಗಾರ

ಎ.ಚಿದಾನಂದ

Related