ದೇಶದ ಭವಿಷ್ಯಕ್ಕಾಗಿ ಮತ ಚಲಾಯಿಸಿ: ಗೋವಿಂದರೆಡ್ಡಿ

ದೇಶದ ಭವಿಷ್ಯಕ್ಕಾಗಿ ಮತ ಚಲಾಯಿಸಿ: ಗೋವಿಂದರೆಡ್ಡಿ

ಔರಾದ: ಲೋಕಸಮರಕ್ಕೆ ಇಡೀ ದೇಶವೇ ಭರ್ಜರಿ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದು ಇಂದು ಔರಾದ್ ಪಟ್ಟಣದಲ್ಲಿ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಸಾರ್ವಜನಿಕರಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಿದರು.

ಮತದಾನ ನಮ್ಮ ಹಕ್ಕು ಅದನ್ನು ಎಲ್ಲರೂ ಚಲಾಯಿಸಬೇಕು. ದೇಶದ ಭವಿಷ್ಯಕ್ಕಾಗಿ ನಮ್ಮ ಒಂದು ಮತ ಬಹಳ ಮುಖ್ಯವಾಗಿದೆ, ಮತದಾನ ಪವಿತ್ರವಾದ ಕರ್ತವ್ಯ. ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ  ಮತದಾನ ಮಾಡಲು ಜಾಗೃತಿ ಮೂಡಿಸಬೇಕೆಂದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಔರಾದ ಪಣಟ್ಟದ ಕನ್ನಡಾಂಭೆ ವೃತ್ತ ದಿಂದಿ ವಾಕ್‌ಥಾನ್ ಗೆ ಚ್ಯಾಲನೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ,ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬುದುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕುರಿತು ವಾಕ್ ಥಾನ್ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ದೇಶದ ಅಭಿವೃದ್ಧಿಗೋಸ್ಕರ ಮತದಾನ ಮಾಡಬೇಕು ಎಂದರು.

ಪ್ರತಿ ಮನೆಯಲ್ಲಿ ಎಲ್ಲರೂ ಮತದಾನ ಜತೆಗೆ ತಮ್ಮ ಅಕ್ಕ-ಪಕ್ಕದ ಜನರಿಗೂ ಮತದಾನ ಮಾಡುವಂತೆ ತಿಳಿಹೇಳಬೇಕು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮತದಾನ ಜಾಗೃತಿ ಕುರಿತು ವಾಕ್ ಥಾನ್ ಸೇರಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಈ ಕಾರ್ಯಕ್ರಮ ಯಶಸ್ವಿಗೊಂಡಿದೆ ಎಂದರು.

ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಮತದಾನ ನಾಡಿ, ಎಲ್ಲ ಇಲಾಖೆಗಳಿಂದ ಮತದಾನ ಜಾಗೃತಿ ಕಾರ್ಯಕ್ರಮ ಮಾಡುವ ಮೂಲಕ ಜಿಲ್ಲೆಯಲ್ಲಿ ಈ ಸಲ ಕಳೆದ ವರ್ಷಕ್ಕಿಂತ ಹೆಚ್ಚಿನ ಮತದಾನವಾಗುವಂತೆ ನೋಡಿ ಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಚುನಾವಣಾ ಅಧಿಕಾರಿ ಔರಾದ ಜಿಓಉಲ್ಲಾ ಕೆ. ತಹಸಿಲ್ದಾರ್ ನಾಗಯ್ಯ ಹಿರೇಮಠ್, ತಾಲೂಕ ಪಂಚಾಯತ್ ಸಿಇಓ ವೆಂಕಟ ಸಿಂದೆ ಸಿಪಿಐ ರಘುವಿರ ಸಿಂಘ ಠಾಕೂರ,ಟಿ.ಎಚ್.ಓ.ಗಾಯತ್ರಿ, ಜೆಸ್ಕಾಂ ಎ.ಇ.ರವಿ ಕಾರಬಾರಿ, ಸಿ ಡಿ ಪಿ ಓ,ಇಮಲಪ್ಪಾ,ಡಾ” ಗೌತಮ ಅರಳಿ, ತಾಲ್ಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿ ಪಾಲ್ಗೊಂಡಿದ್ದರು.

Related