ಶಿಕ್ಷಕಿ ವರ್ಷಾ ಶಿಂಧೆ ರವರಿಗೆ ಸನ್ಮಾನ

ಶಿಕ್ಷಕಿ ವರ್ಷಾ ಶಿಂಧೆ ರವರಿಗೆ ಸನ್ಮಾನ

ಕಮಲನಗರ: ಮಹಾರಾಷ್ಟ್ರ ಗಡಿಭಾಗದಲ್ಲಿರುವ ಕಮಲನಗರ ತಾಲ್ಲೂಕಿನ ಗಂಗನಬೀಡ್ ಗ್ರಾಮದ ರ‍್ಕಾರಿ ಶಾಲೆಯಲ್ಲಿ ಶಿಕ್ಷಕಿ ವರ್ಷಾ ಸಂಜುಕುಮಾರ ಚಾಂಗೋನೆ ಅವರು ಭಡ್ತಿಯಾಗಿ ಸರ‍್ಕಾರಿ ಬಾಲಕಿಯರ ಪ್ರೌಢಶಾಲೆ ಠಾಣಾ ಕುಶನೂರದಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಂಗನಬೀಡ್ ಗ್ರಾಮ ಪಂಚಾಯತ್ ಸದಸ್ಯರಾದ ಕೈವಲ್ಯ ಬಾಯಿ ಲಕ್ಷ್ಮಣರಾವ್ ವಾಡಿಕರ ಮನೆಗೆ ಕರೆದು ವರ್ಷಾ ಶಿಂಧೆ ಅವರಿಗೆ ಶಾಲು, ಶ್ರೀಫಳ, ಹೂಹುಚ್ಚ, ಪುಸ್ತಕ ಕೊಟ್ಟು ಸನ್ಮಾನಿಸಿದರು.

ಬಳಿಕ ಅಂಕುಶ ವಾಡಿಕರ ಮಾತನಾಡಿ, ವರ್ಷಾ ಶಿಂಧೆ ಶಿಕ್ಷಕಿ ೨೦೧೦ರಲ್ಲಿ ಗಂಗನಬೀಡ್ ಗ್ರಾಮದ ರ‍್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಆರಂಭಿಸಿ ಮಕ್ಕಳ ಜೊತೆ ಮಕ್ಕಳಾಗಿ ಬೆರೆತು ಮಕ್ಕಳ ಬುದ್ಧಿಮಟ್ಟಕ್ಕೆ ಅನುಗುಣವಾಗಿ ತಿಳಿಸುವಂತೆ ಬೋಧನೆ ಮಾಡುತ್ತಿದ್ದರು. ಇಂಗ್ಲಿಷ್, ಸಂಸ್ಕೃತಿ, ನೈತಿಕ ಶಿಕ್ಷಣ, ದೈಹಿಕ ಶಿಕ್ಷಣ ಮಕ್ಕಳಿಗೆ ಕಲಿಸುತ್ತಿದ್ದರು. ಮಕ್ಕಳ ಸವಾರ್ಂಗೀಣ ಅಭಿವೃದ್ಧಿ ಮಾಡಲು ಸದಾ ಶ್ರಮಿಸುತ್ತಿದ್ದರು.

ವರ್ಷಾ ಶಿಕ್ಷಕಿಯರಿಗೆ ೨೦೧೫ರಲ್ಲಿ ತಾಲ್ಲೂಕು ಮಟ್ಟದಲ್ಲಿ ಆರ‍್ಶ ಶಿಕ್ಷಕಿ ಎಂದು ಪುರಸ್ಕಾರ ದೊರಕಿದೆ. ಇವರ ಸೇವೆ ನಮ್ಮ ಗ್ರಾಮಕ್ಕೆ ಅಮೋಘವಾದದ್ದು ಹಾಗೂ ಮಾದರಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ವರ್ಷಾ ಶಿಂಧೆಯವರು ೫ ನೇ ಜೂನ್ ೨೦೨೦ರಲ್ಲಿ ರ‍್ಕಾರಿ ಬಾಲಕಿಯರ ಪ್ರೌಢಶಾಲೆ ಕುಶನೂರದಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಬಡ್ತಿ ಯಾಗಿದ್ದಾರೆ. ಹೀಗೆ ಬಡ್ತಿ ಆಗುತ್ತಾ ಉನ್ನತ ಸ್ಥಾನಕ್ಕೆ ಹೋಗಬೇಕೆಂದು ಶುಭ ಹಾರೈಸಿದರು.

ಈ ವೇಳೆ ಗಯಾಬಾಯಿ ವಾಡಿಕರ, ಸಂಗೀತಾ ವಾಡಿಕರ, ಸುನೀತಾ ವಾಡಿಕರ, ರೇಖಾ ವಾಡಿಕರ, ರಂಜನಾ ವಾಡಿಕರ, ಕು.ಅಂಕಿತಾ ವಾಡಿಕರ, ಇನ್ನಿತರರಿದ್ದರು.

Related